ಬಂಟ್ವಾಳ

ಸೇನಾ ಯೋಧ ದಿನೇಶ್ ಸೂತ್ರಬೈಲು ಅವರಿಗೆ ಹುಟ್ಟೂರ ಸನ್ಮಾನ

ಬಂಟ್ವಾಳ: ಇರಾ ಗ್ರಾಮ ನಿವಾಸಿ ದಿನೇಶ್ ಸೂತ್ರಬೈಲು ಅವರು ಭಾರತೀಯ ಸೇವೆಯಲ್ಲಿ 17 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಹುಟ್ಟೂರಿಗೆ ಮರಳಿದ ಸಂದರ್ಭ ಹುಟ್ಟೂರ ಸ್ವಾಗತ ಕಾರ್ಯಕ್ರಮ ನಡೆಸಲಾಯಿತು.
ಅವರನ್ನು ಮುಡಿಪು ಮುಡಿಪಿನ್ನಾರ್ ದೈವಸ್ಥಾನದ ಬಳಿಯಿಂದ ಗ್ರಾಮಕ್ಕೆ ಮೆರವಣಿಗೆಯಲ್ಲಿ ಕರೆ ತಂದು, ಇರಾ ಮಲಯಾಳಿ ಬಿಲ್ಲವ ಸಂಘದ ಸಮುದಾಯ ಭವನದಲ್ಲಿ ಸನ್ಮಾನಿಸಲಾಯಿತು.
ನಿವೃತ್ತ ಯೋಧ ದಿನೇಶ್ ಮಾತನಾಡಿ, ದೇಶಸೇವೆಯಲ್ಲಿ 17 ವರ್ಷಗಳ ಕಾಲ ಪಾಲ್ಗೊಂಡ ತೃಪ್ತಿಯಿದ್ದು, ಯುವಕರು ಸೇನೆಗೆ ಸೇರುವಂತೆ ಕರೆ ನೀಡಿದರು.
ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ನಿವೃತ್ತ ಶಿಕ್ಷಕ ಗೋಪಾಲ ಮಾಸ್ಟರ್, ಮಾಜಿ ಯೋಧ ಉದಯಕುಮಾರ್, ಇರಾ ಗ್ರಾ.ಪಂ.ಅಧ್ಯಕ್ಷೆ ಆ್ಯಗ್ನೆಲ್ ಡಿಸೋಜಾ, ಉಪಾಧ್ಯಕ್ಷ ಮೊಯಿದು ಕುಂಞ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಪ್ರತಾಪ್‌ಚಂದ್ರ ಸಮ್ಮಾನ ಪತ್ರ ವಾಚಿಸಿದರು. ಯತಿರಾಜ್ ಶೆಟ್ಟಿ ಸ್ವಾಗತಿಸಿದರು. ಸುರೇಶ್ ಕೊಟ್ಟಾರಿ ವಂದಿಸಿದರು. ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು. 

NEWSDESK

Recent Posts