ಬಂಟ್ವಾಳ

ಶಾಸಕ ಯು.ಟಿ.ಖಾದರ್ ಅವರಿಂದ ಆಲಾಡಿಯಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಗತಿ-ಪರಿಶೀಲನೆ

ಬಂಟ್ವಾಳ: ಮಂಗಳೂರು ವಿಧಾನಸಭಾ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಜೀಪಮುನ್ನೂರಿನ ಆಲಾಡಿಯಲ್ಲಿ ನಿರ್ಮಾಣವಾಗುತ್ತಿರುವ 182 ಕೋ.ರೂ.ಗಳ ಮೊದಲ ಹಂತದ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಇದನ್ನು 2ನೇ ಹಂತದಲ್ಲಿ ವಿಸ್ತರಿಸಲು ಈಗಾಗಲೇ 280 ಕೋ.ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಗಳೂರು ಶಾಸಕ ಯು.ಟಿ.ಖಾದರ್ ಹೇಳಿದರು.

ಮಂಗಳವಾರ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಆಲಾಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ ಯೋಜನೆಯ ಜಾಕ್‌ವೆಲ್ ಕಾಮಗಾರಿ ಪರಿಶೀಲನೆ ನಡೆಸಿ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು  ಆಧುನಿಕ ತಂತ್ರಜ್ಞಾನದ ಗೇಟ್ ಸಿಸ್ಟಮ್‌ನ ಜಾಕ್‌ವೆಲ್ ರಾಜ್ಯದಲ್ಲೇ ಮೊದಲ ಬಾರಿಗೆ ಇಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದು ಹೇಳಿದರು.

ಹಿಂದೆ ತಾನು ನಗರಾಭಿವೃದ್ಧಿ ಸಚಿವನಾಗಿದ್ದ ವೇಳೆ ಕ್ಷೇತ್ರದ ಗ್ರಾಮೀಣ ಹಾಗೂ ನಗರ ವ್ಯಾಪ್ತಿಯ ಎಲ್ಲಾ ಭಾಗದ ಜನರಿಗೆ 24 ಗಂಟೆ ಕುಡಿಯುವ ನೀರಿನ್ನು ಒದಗಿಸಲು ಯೋಜನೆ ಅನುಷ್ಠಾನಗೊಂಡಿತ್ತು. ಈ ಜಾಕ್‌ವೆಲ್‌ನಲ್ಲಿ 1300 ಎಚ್‌ಪಿಯ 4 ಪಂಪುಗಳಿರಲಿದ್ದು, ಕಂಬಳಪದವು ವಾಟರ್ ಟ್ರಿಟ್‌ಮೆಂಟ್ ಫ್ಲಾಂಟ್ ನಿರ್ಮಾಣವಾಗಲಿದ್ದು, ಒಟ್ಟು 72 ಎಂಎಲ್‌ಡಿ ನೀರನ್ನು ನದಿಯಿಂದ ಎತ್ತಲಾಗುತ್ತದೆ ಎಂದರು.           

ಜಾಹೀರಾತು

ಗೊಂದಲ ಬೇಡ: ಸಜೀಪಮುನ್ನೂರು ಗ್ರಾಮದ ನಾಗರಿಕರಿಗೆ ಯಾವುದೇ ಗೊಂದಲ ಬೇಡ,ಈ ಯೋಜನೆಯಿಂದ ಸಜೀಪಮನ್ನೂರು ಸಹಿತ ಅಕ್ಕಪಕ್ಕದ ಗ್ರಾಮಗಳಿಗೂ   ನೀರು ಪೂರೈಕೆಗೆ ಎಲ್ಲಾ ರೀತಿ ಕ್ರಮ ಕೈಗೊಳ್ಳಲಾಗುವುದು ಎರಡನೇ ಹಂತದ ಪೈಪ್ ಲೈನ್ ಕಾಮಗಾರಿಯ ಸಂದರ್ಭದಲ್ಲಿ ಈ ಭಾಗದ ಜನರಿಗೂ ನೀರು ಪೂರೈಕೆಗೆ ಸಂಬಂಧಿಸಿ ಪೈಪ್ ಲೈನ್ ಅಳವಡಿಸಲಾಗುವುದು ಎಂದು ಹೇಳಿದರು.
ಉಳ್ಳಾಲ ತಾಲೂಕು ಅನುಷ್ಠಾನದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರ ನೇಮಕವಾಗಿದ್ದು, ಪ್ರಸ್ತುತ ಉಳ್ಳಾಲದಿಂದ ಪುದು, ತುಂಬೆ, ಮೇರಮಜಲು ಗ್ರಾಮಗಳನ್ನು ಕೈಬಿಟ್ಟಿರುವುದರಿಂದ 20 ಕೋ.ರೂ.ಗಳ ಸಜೀಪ- ತುಂಬೆ ಸೇತುವೆ ಕಾಮಗಾರಿಯೂ ವಿಳಂಬವಾಗಿದ್ದು, ಅದಕ್ಕೆ ಒಪ್ಪಿಗೆ ಸಿಗುವ ಕಾರ್ಯ ಬಾಕಿ ಇದೆ ಎಂದರು.
ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಂಗಳೂರು ತಾ.ಪಂ.ಅಧ್ಯಕ್ಷ ಮೊಹಮ್ಮದ್ ಮೋನು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಕುರ್ನಾಡು ಗ್ರಾ.ಪಂ.ಅಧ್ಯಕ್ಷ ಗಣೇಶ್ ನಾಯಕ್, ಬೋಳಿಯಾರು ಗ್ರಾ.ಪಂ.ಅಧ್ಯಕ್ಷೆ ಜೆಸಿಂತಾ ಪಿಂಟೊ, ಉಪಾಧ್ಯಕ್ಷ ಶುಕುರ್, ಇರಾ ಗ್ರಾ.ಪಂ.ಉಪಾಧ್ಯಕ್ಷ ಮೊಯಿದು ಕುಂಞ, ಕರ್ನಾಟಕ ಜಲಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಬಿ.ರವಿ, ಸಹಾಯಕ ಎಂಜಿನಿಯರ್ ಶೋಭಲಕ್ಷ್ಮೀ, ತಾ.ಪಂ.ಮಾಜಿ ಸದಸ್ಯ ಪ್ರವೀಣ್ ಆಳ್ವ, ಪ್ರಮುಖರಾದ ಎಂ.ಸುಬ್ರಹ್ಮಣ್ಯ ಭಟ್, ಶೋಭಿತ್ ಪೂಂಜ, ಅಬ್ದುಲ್ ರಝಾಕ್ ಕುಕ್ಕಾಜೆ, ದೇವದಾಸ್ ಭಂಡಾರಿ, ಯೂಸುಫ್ ಕರಂದಾಡಿ, ನಾಸಿರ್ ನಡುಪದವು, ಫಿರೋಜ್ ಮಲಾರ್, ಅಬೂಬಕ್ಕರ್ ಸಜೀಪ, ಸೂಫಿ ಕುಂಞ ಮೊದಲಾದವರಿದ್ದರು. 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
NEWSDESK