ವಿಟ್ಲ

‘ನೇತಾಜಿ ಟ್ರೋಫಿ 2021’ ವಾಲಿಬಾಲ್ ಪಂದ್ಯಾಟ – ನೇತಾಜಿ ತಂಡಕ್ಕೆ ಪ್ರಶಸ್ತಿಯ ಗರಿ

ವಿಟ್ಲ :ನೇರಳಕಟ್ಟೆ ನೇತಾಜಿ ನಗರದ ನೇತಾಜಿ ಗೆಳೆಯರ ಬಳಗದ ವತಿಯಿಂದ ‘ನೇತಾಜಿ ಟ್ರೋಫಿ 2021’ ವಾಲಿಬಾಲ್ ಪಂದ್ಯಾಟವು ಭಾನುವಾರ ನಡೆಯಿತು. ಪಂದ್ಯಾಟವನ್ನು ನೇರಳಕಟ್ಟೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಠಲ ನಾಯ್ಕ ಉದ್ಘಾಟಿಸಿದರು, ನೇರಳಕಟ್ಟೆ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಡಿ.ತನಿಯಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.  ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಶೋಕ್ ರೈ, ಧನಂಜಯ ಗೌಡ, ಲತೀಫ್ ನೇರಳಕಟ್ಟೆ, ನಿವೃತ್ತ ಸೈನಿಕ ನಿತೀಶ್ ನೇರಳಕಟ್ಟೆ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿರಂಜನ್ ರೈ, ಉದ್ಯಮಿಗಳಾದ ಗಣೇಶ್ ಪುಣೆ, ಕೇಶವದಾಸ್ ಕುಂಪಲ, ಮಿಥುನ್ ರೈ ಕೊಡಂಗೆಮಾರು, ರಮ್ಲ ಕಲ್ಪಾಡಿಗದ್ದೆ, ವಿಶುಕುಮಾರ್ ವೈ.ಸಿ.ಜಿ, ಶೀತಲ್ ವೈ.ಸಿ.ಜಿ, ಉರ್ದಿಲ ನವಯುಗ ಜನಸ್ನೇಹಿ ಅಧ್ಯಕ್ಷ ಸುಜಿತ್, ಪೆರಾಜೆ ವಿಷ್ಣುಮೂರ್ತಿ ಗೆಳೆಯರ ಬಳಗದ ಅಧ್ಯಕ್ಷ ಸುನಿಲ್ ನೇರಳಕಟ್ಟೆ, ಉಪ್ಪಿನಂಗಡಿ ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್  ಬಲ್ ಜಿ.ಕೃಷ್ಣಪ್ಪ ನಾಯ್ಕ್, ಪ್ರಮುಖರಾದ ಬಾಲಕೃಷ್ಣ ಗೌಡ ಮಾಯಿಲಗುಡ್ಡೆ, ಕೇಶವ ಗೌಡ ಕುಡೋಲ್, ರಕ್ಷಿತ್ ಶೆಟ್ಟಿ ಮುಂಬೈ, ಹರೀಶ್ ಆಳ್ವ ಮಾದೇಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಶೋಕ್, ಗೆಳೆಯರ ಬಳಗದ ಕೋಶಾಧಿಕಾರಿ ಅಕ್ಷತ್ ನಾಯ್ಕ್ ಮೊದಲಾದವರು ಭಾಗವಹಿಸಿದ್ದರು.                   

ಗೆಳೆಯರ ಬಳಗದ ಅಧ್ಯಕ್ಷ ವಸಂತ ಗೌಡ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಎಂ.ವಂದಿಸಿದರು. ನೇರಳಕಟ್ಟೆ ಶಾಲಾ ಶತಮಾನೋತ್ಸವ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಕ್ರೀಡಾ ಕಾರ್ಯದರ್ಶಿ ಬೇಬಿ ನಾಯ್ಕ್ ನಿರೂಪಿಸಿದರು.

ವಾಲಿಬಾಲ್ ಪಂದ್ಯಾಟದಲ್ಲಿ ನೇತಾಜಿ ಗೆಳೆಯರ ಬಳಗ ಪ್ರಥಮ, ಉದಯ ಯುವಕ ಮಂಡಲ ಸೇರಾ ತಂಡ ದ್ವಿತೀಯ, ಸತ್ಯಶ್ರೀ ಅಡ್ಲಬೆಟ್ಟು ತೃತೀಯ ಹಾಗೂ ಸತ್ಯದೇವತಾ ಬೊಳ್ಳಾರು ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ನೇತಾಜಿ ತಂಡದ ರೋಶನ್ ಶೆಟ್ಟಿ ಕೊಡಂಗೆಮಾರು ಸವ್ಯಸಾಚಿ ಆಟಗಾರ, ರಿತೇಶ್ ಉತ್ತಮ ಎತ್ತುಗಾರ ಹಾಗೂ ಸೇರಾ ತಂಡದ ಕಿರಣ್ ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

NEWSDESK