ಬಂಟ್ವಾಳ

ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರೊ. ನಂಜುಂಡಸ್ವಾಮಿ ನೆನಪು

ಬಂಟ್ವಾಳ: ಕರ್ನಾಟಕ ರಾಜ್ಯ ರೈತ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ನೆನಪು ಕಾರ್ಯಕ್ರಮ ನಡೆಯಿತು.

ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತ ಜಾಗೃತಿ ದಿನಾಚರಣೆ, ಇಂದಿನ ಕೃಷಿ ಮಸೂದೆಗಳು ಎಮ್.ಡಿ.ಎನ್.ರವರ ಮುಂದಾಲೋಚನೆಗಳ ಕುರಿತು ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮಗಳು ನಡೆದವು.

ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಮ್.ಡಿ.ಎನ್. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೈತಸಂಘದ ಹುಟ್ಟು ನಡೆದು ಬಂದ ದಾರಿ, ಗ್ಯಾಟ್ ಒಪ್ಪಂದದಿಂದ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರ ಹಾಗೂ ದುಡಿಯುವ ಜನತೆಯ ಬದುಕಿನ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಕುರಿತು 90 ರ ದಶಕದಲ್ಲಿಯೇ ಎಮ್.ಡಿ.ಎನ್. ನೀಡಿದ ಎಚ್ಚರಿಕೆಯ ಸಲಹೆಗಳನ್ನು ನೆನಪಿಸಿದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತಸಂಘಟನೆಗಳನ್ನು ಒಂದು ವೇದಿಕೆಯ ಅಡಿಯಲ್ಲಿ ತಂದು ರೂಪಿಸಿದ ಹೋರಾಟಗಳನ್ನು ನಾವು ಗಟ್ಟಿಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಚಾರಗೋಷ್ಠಿಯಲ್ಲಿ ಹಿರಿಯ ರೈತ ಮುಖಂಡರಾದ ಸನ್ನಿ ಡಿಸೋಜ, ಬಂಟ್ವಾಳ ತಾಲೂಕು ಅಧ್ಯಕ್ಷ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ, ಸುಳ್ಯ ತಾಲೂಕು ಅಧ್ಯಕ್ಷ ಲೋಲಜಾಕ್ಷ ಗೌಡ ಭೂತಕಲ್ಲು ವಿಚಾರ ಮಂಡಿಸಿದರು. ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್  ಕಾರ್ಯಕ್ರಮ ನಿರ್ವಹಿಸಿದರು, ಬಂಟ್ವಾಳ ತಾಲೂಕು ಸಂಘಟನಾ ಕಾರ್ಯದರ್ಶಿ ಸದಾನಂದ ಶೀತಲ್ ಧನ್ಯವಾದ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ ಮಜಿಗುಂಡಿ. ಲೊರೆಟ್ಟೊ, ವಲಯ ಘಟಕದ ಪ್ರಧಾನ ಕಾರ್ಯದರ್ಶಿ ವಿವಿಯನ್ ಪಿಂಟೊ, ಐವರ್ನಾಡು ಗ್ರಾಮ ಘಟಕದ ಕಾರ್ಯದರ್ಶಿ ಮಂಜುನಾಥ ಮಡ್ತಿಲ, ಪೆರ್ನೆ ವಲಯ ಘಟಕದ ಉಪಾಧ್ಯಕ್ಷರಾದ ಹುಸೈನಾರ್ ನೀರುಮಾರ್ಗ, ಘಟಕದ ಅಧ್ಯಕ್ಷ ವಿನ್ಸೆಂಟ್, ರೋಯ್ ಕಾರ್ಲೋ ಹಾಗೂ ಇತರ ಸದಸ್ಯರು ಭಾಗವಹಿದ್ದರು.

NEWSDESK

Recent Posts