ಬಂಟ್ವಾಳ

ಅಡಕೆಗೆ ಹನಿ ನೀರಾವರಿ ಅತ್ಯುತ್ತಮ ಪದ್ಧತಿ: ಬಂಟ್ವಾಳದಲ್ಲಿ ನಡೆದ ಕೃಷಿ ಉತ್ಸವದಲ್ಲಿ ಹಿರಿಯ ವಿಜ್ಞಾನಿ ಡಾ. ನಾಗರಾಜ್

ಬಂಟ್ವಾಳ: ಹನಿ ನೀರಾವರಿ ಅಡಕೆಗೆ ಅತ್ಯುತ್ತಮ ನೀರಾವರಿ ಪದ್ಧತಿ ಎಂದು  ವಿಟ್ಲ ಸಿ.ಪಿ.ಸಿ.ಆರ್.ಐ. ಹಿರಿಯ ವಿಜ್ಞಾನಿ ಡಾ. ನಾಗರಾಜ್ ಹೇಳಿದರು. ಕ‌ನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ವತಿಯಿಂದ ಬಂಟ್ವಾಳ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಕರಾವಳಿ ಕಲೋತ್ಸವ 2021ಹಿನ್ನೆಲೆಯಲ್ಲಿ ಕೃಷಿ ಉತ್ಸವ ಉದ್ಘಾಟನೆ ನಡೆಯಿತು.

ಈ ಸಂದರ್ಭ ವಿಟ್ಲ ಸಿ.ಪಿ.ಸಿ.ಆರ್.ಐ. ನಿಂದ ನಡೆದ ಸಂಶೋಧ‌ನೆಗಳ ಮಾಹಿತಿ ನೀಡಿದ , ಕುಬ್ಜ ತಳಿಗಳ ಮಹತ್ವ ಬಗ್ಗೆ ವಿವರಿಸಿದರು. ತೋಟದಲ್ಲಿ ನಾಟಿ ಮಾಡುವ ಗಿಡಗಳ ಗುಣಮಟ್ಟ ವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅಡಿಕೆ ಗಿಡಗಳ ಗುಣಮಟ್ಟ ವರ್ಧಿಸಲು ಸಿಪಿಸಿಆರ್ ನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ತಂತ್ರಜ್ಞಾನದ ಅಭಿವೃದ್ಧಿಯಿಂದ ರೈತರಿಗೆ ಉತ್ತಮ ಗುಣಮಟ್ಟದ ಗಿಡಗಳನ್ನು ನಾಟಿ ಮಾಡಲು ಒದಗಿಸಲಾಗುತ್ತದೆ ಎಂದರು. ಬಹುಬೆಳೆ ಸಂದರ್ಭ ಗಿಡಗಳ ನಡುವೆ ಅಂತರ ಕಾಯ್ದುಕೊಳ್ಳುವ ವಿಧಾನ, ಗೊಬ್ಬರಗಳ ಮಾಹಿತಿ ನೀಡಿದರು. ಪೋಷಕಾಂಶ ನಿರ್ವಹಣೆಯನ್ನು ಮಣ್ಣು ಪರೀಕ್ಷೆ ಆಧಾರದಲ್ಲಿ ಮಾಡಬೇಕು ಎಂದರು

ಸರಪಾಡಿ ವಲಯ ರೈತಸಂಘ ಅಧ್ಯಕ್ಷರಾದ ಸರಪಾಡಿ ಅಶೋಕ ಶೆಟ್ಟಿ ಉದ್ಘಾಟಿಸಿದರು. ಅನ್ನದಾತಾ ಸುಖೀ ಭವ, ರೈತ ಸುಖವಾಗಿದ್ದರೆ ದೇಶ ಸುಭಿಕ್ಷ ಎಂದ ಅವರು, ದೇಶ ಕಾಯುವ ಯೋಧರಂತೆ ನಮ್ಮ ರಕ್ಷಣೆ ಮಾಡುವವರು ರೈತರು. ಅವರಿಗೂ ಭದ್ರತೆ ಅಗತ್ಯ. ಯುವ ಜನಾಂಗ ಪ್ರಧಾನಿ ಅವರ ಆತ್ಮ ನಿರ್ಭರತೆ ಕಾರ್ಯಕ್ರಮ ದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ಜನಾಂಗ ಕೃಷಿಯಲ್ಲಿ ತೊಡಗಿಸಿ ಕೊಳ್ಳುವಂತಾಗಲು ಸೂಕ್ತ ಮಾರ್ಗದರ್ಶನ ಅಗತ್ಯ ಎಂದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸೇಸಪ್ಪ ಮಾಹಿತಿ ನೀಡಿದರು.,ಚಿಣ್ಣರ ಲೋಕದ ಸ್ಥಾಪಕ ಮೋಹನದಾಸ ಕೊಟ್ಟಾರಿ,  ಚಿಣ್ಣರ ಅಧ್ಯಕ್ಷೆ ಭಾಗ್ಯಶ್ರೀ, ಕೃಷಿ ಉತ್ಸವ ಸಂಚಾಲಕ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ ಉಪಸ್ಥಿತರಿದ್ದರು.ನಾಟಕ ಸಮಿತಿ ಸಂಚಾಲಕ ರತ್ನದೇವ ಪುಂಜಾಲಕಟ್ಟೆ ಸ್ವಾಗತಿಸಿದರು. ದೇವಪ್ಪ ಕುಲಾಲ್, ಪ್ರಕಾಶ್ ಶೆಟ್ಟಿ ಶ್ರೀಶೈಲ ಕೃಷಿ ಕುರಿತು ಪ್ರಶ್ನೆ ಕೇಳಿದರು. ಡಾ.ತೀರ್ಥಪ್ರಸಾದ್ ವಂದಿಸಿದರು.  ರಂಗಭೂಮಿ ಕಲಾವಿದ ಪುರುಷೋತ್ತಮ ಕೊಯ್ಲ ಕಾರ್ಯಕ್ರಮ ನಿರ್ವಹಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ