ಬಂಟ್ವಾಳ: ಇಲ್ಲಿನ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಸಾಮಾಜಿಕ ಸಂಘಟನೆಗಳ ಬೆಂಬಲದೊಂದಿಗೆ ಬ್ತಹ್ಮರಕೂಟ್ಲು ಟೋಲ್ ಗೇಟ್ ಶಾಶ್ವತವಾಗಿ ತೆರವುಗೊಳಿಸುವಂತೆ ಒತ್ತಾಯಿಸಿ ಬೃಹತ್ ಹೆದ್ದಾರಿ ತಡೆಯನ್ನು ಮಾ.9ರಂದು ನಡೆಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅಧ್ಯಕ್ಷ ಪ್ರಭಾಕರ ದೈವಗುಡ್ಡೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು. ಈ ಸಂದರ್ಭ ವಕೀಲರ ಸಂಘ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಮತ್ತು ಹಿರಿಯ ವಕೀಲ ಉಮೇಶ್ ಕುಮಾರ್ ವೈ ಮಾತನಾಡಿ ನಿಟ್ಟಿನಲ್ಲಿ ಹೋರಾಟವನ್ನು ಪರಿಣಾಮಕಾರಿಯಾಗಿ ನಡೆಸಲು ತೀರ್ಮಾನಿಸಬೇಕಾಗಿದೆ ಜೊತೆಜೊತೆಗೆ ಕಾನೂನಾತ್ಮಕವಾಗಿಯೂ ಹೋರಾಟ ನಡೆಸಬೇಕಾಗಿದೆ. ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಶನ್ ಹಾಕಬೇಕಿದೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ಸಮಾನ ಮನಸ್ಕ ಸಂಘಟನೆಯು ರಾಜಕೀಯೇತರ ಸಂಘಟನೆಯಾಗಿ ಕಾರ್‍ಯಾಚರಿಸುತ್ತಿದೆ. ಸಾಮಾಜಿಕ ಹೋರಾಟಗಳನ್ನು ಬೆಂಬಲಿಸಲು ಇಚ್ಚಿಸುವ ಯಾವುದೇ ಸಂಘಟನೆಗಳು ನಮ್ಮ ಸೇರಿಕೊಳ್ಳಬಹುದು ಎಂದು ಸಮಿತಿಯ ಅಧ್ಯಕ್ಷರು ಹೇಳಿದರು. ದ.ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಅಣ್ಣು ಪೂಜಾರಿ, ಕಾರ್‍ಯದರ್ಶಿ ಸುರೇಶ್ ಕುಲಾಲ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ವಿವಿಧ ವಾಹನ ಚಾಲಕ, ಮಾಲಕ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು. ಅಂದು ಬೆಳಿಗ್ಗೆ ೧೦ ಗಂಟೆಗೆ ಹೆದ್ದಾರಿ ತಡೆ ಶಾಂತಿಯುತವಾಗಿ ನಡೆಯಲಿದೆ. ಈ ನ್ಯಾಯ ಪರ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುವಂತೆ ಸಮಿತಿ ಅಧ್ಯಕ್ಷ ಬಿ.ಎಂ.ಪ್ರಭಾಕರ ದೈವಗುಡ್ಡೆ ಹಾಗೂ ಕಾರ್ಯದರ್ಶಿ ಬಿ.ಶೇಖರ್ ವಿನಂತಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…