ಬಂಟ್ವಾಳ: ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ನಿಯೋಗ ಶನಿವಾರ ಉಡುಪಿ ಹಾಗೂ ದ.ಕ.ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ-2021 ಪರಿಶೀಲನೆ ಹಿನ್ನೆಲೆಯಲ್ಲಿ ಬಂಟ್ವಾಳದ ಗೋಳ್ತಮಜಲಿನಲ್ಲಿ ಸ್ಥಳ ಪರಿವೀಕ್ಷಣೆ ನಡೆಸಿದರು.
ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ ಡಿ.ಶಂಭು ಭಟ್, ಉಪ ಮುಖ್ಯ ಚುನಾವಣಾಧಿಕಾರಿಗಳಾದ ಬಿ.ವಿ.ಲಕ್ಷ್ಮೇಶ್ವರ್ ಹಾಗೂ ಎಚ್.ಎಸ್.ದಿನೇಶ್‌ಚಂದ್ರ ಪರಿಶೀಲನೆ ನಡೆಸಿದರು. ಗೋಳ್ತಮಜಲಿನ ಕುಂಟಿಪಾಪು ಮೋಹನ ಎಚ್. ಅವರ ಪುತ್ರಿ ನಿಹಾರಿಕಾ ಅವರ ಬಳಿ ಮಾಹಿತಿ ಪಡೆದರು. ಬಂಟ್ವಾಳ ಚುನಾವಣಾ ಶಾಖೆಯ ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಪ್ರಥಮ ದರ್ಜೆ ಸಹಾಯಕ ರಾಜ್‌ಕುಮಾರ್, ಮೋಹನ, ಬಿಎಲ್‌ಒ ರಮೇಶ್ ಎ.ಕೆ. ಅವರು ಜತೆಗಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…