ಬಂಟ್ವಾಳ: ಮಾಣಿಯಲ್ಲಿರುವ ಕರ್ನಾಟಕ ಪ್ರೌಢಶಾಲೆಯಲ್ಲಿ ಕೇಂದ್ರ ನೀತಿ ಆಯೋಗದ ಸಹಯೋಗದೊಂದಿಗೆ ಅಟಲ್ ಇನ್ನೋವೇಷನ್ ಮಿಷನ್ ಆಶ್ರಯದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಲೋಕಾರ್ಪಣೆ ಮತ್ತು ಪ್ರತಿಭಾನ್ವಿತರಿಗೆ ಅಭಿನಂದನಾ ಕಾರ್ಯಕ್ರಮದ ಶನಿವಾರ ನಡೆಯಿತು.
ನಾಡಿನ ಎಲ್ಲಾ ಮಕ್ಕಳು ಕೌಶಲ್ಯಾಬಿವೃದ್ಧಿ ಅರಿತುಕೊಂಡರೆ ದೇಶ ಬಲಿಷ್ಟವಾಗುತ್ತದೆ ಎಂದು ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ನಾರಾಯಣ ಹೆಗ್ಡೆ, ಸಂಪನ್ಮೂಲ ಕೇಂದ್ರ ಬಂಟ್ವಾಳದ ಬ್ಲಾಕ್ ಸಂಪನ್ಮೂಲ ಅಧಿಕಾರಿ ರಾಘವೇಂದ್ರ ಬಲ್ಲಾಳ್, ಶಿಕ್ಷಣ ಸಂಯೋಜಕರಾದ ಸುಜಾತ ಮತ್ತು ಸುಧಾ, ಆಡಳಿತ ಮಂಡಳಿ ಸಂಚಾಲಕರಾದ ಹಾಜಿ ಇಬ್ರಾಹಿಂ ಕೆ ಮಾಣಿ, ಉಪಾಧ್ಯಕ್ಷರಾದ ಹಬೀಬ್ ಕೆ ಮಾಣಿ, ಕೋಶಾಧಿಕಾರಿ ಜಗನ್ನಾಥ ಚೌಟ, ಜತೆ ಕಾರ್ಯದರ್ಶಿ ಕುಶಾಲ ಎಂ ಪೆರಾಜೆ ಉಪಸ್ಥಿತರಿದ್ದರು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಮತ್ತು ಅಟಲ್ ಟಿಂಕರಿಂಗ್ ಲ್ಯಾಬ್‌ನ ವಲಯ ಸಂಯೋಜಕಿ ಜಯಲಕ್ಷ್ಮೀ ಎ ಅವರನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ಕಿರಣ್ ಹೆಗ್ಡೆ ಸ್ವಾಗತಿಸಿದರು. ಮುಖ್ಯೋಪಾದ್ಯಾಯರಾದ ಬಿ.ಕೆ ಭಂಡಾರಿ ವಂದಿಸಿರು, ಶಿಕ್ಷಕಿಯರಾದ ಶ್ಯಾಮಲಾ ಕೆ ಮತ್ತು ನಯನ ಎಸ್ ಕಾರ್ಯಕ್ರಮ ನಿರೂಪಿಸಿದರು.