ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ (ರಿ) ವತಿಯಿಂದ ಬಿ.ಸಿ.ರೋಡಿನ ಪೊಸಳ್ಳಿಯಲ್ಲಿರುವ ಕುಲಾಲ ಸಮುದಾಯ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷರಾದ ಜಯಂತಿ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಸುಮಾರು 48 ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ, 18 ವಿಧ್ಯಾರ್ಥಿಗಳಿಗೆ ನಿರಂತರ ವಿಧ್ಯಾರ್ಥಿ ವೇತನ, 9 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಅಧ್ಯಕ್ಷ ಮಯ್ಯೂರ್ ಉಳ್ಳಾಲ್, ಕೀಲು ಮತ್ತು ಎಲುಬು ತಜ್ಞ ವೈದ್ಯ ಡಾ. ಚೇತನ್ ರಾಜ್, ಪ್ರಮುಖರಾದ ಪುರಂದರ ಸಜಿಪ, ರಮೇಶ್ ಸಾಲಿಯಾನ್, ಸುಕುಮಾರ್ ಬಂಟ್ವಾಳ್, ನಮಿತಾ ಉಮೇಶ್, ನಿಶಾಂತ್ ಎಂ.ಬಿ ಭಾಗವಹಿಸಿದ್ದರು. ದಾಮೋದರ ಮಾಸ್ತರ್ ಸ್ವಾಗತಿಸಿದರು. ಸುಕುಮಾರ್ ಬಂಟ್ವಾಳ ವಂದಿಸಿದರು. ರಾಧಾಕೃಷ್ಣ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.