ಬಂಟ್ವಾಳ: ಯಕ್ಷಮಿತ್ರರು ಕೈಕಂಬ ಬಿ.ಸಿ.ರೋಡ್ ಆಶ್ರಯದಲ್ಲಿ 12ನೇ ವರ್ಷದ ಯಕ್ಷಗಾನ ಕಾರ್ಯಕ್ರಮ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯ ಹೊರಾಂಗಣದಲ್ಲಿ ಶುಕ್ರವಾರ (ಜ.29ರಂದು) ನಡೆಯಲಿದೆ. ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭ ಹನುಮಗಿರಿ ಮೇಳದಿಂದ ಶ್ರೀಕೃಷ್ಣ ತುಲಾಭಾರ, ಶೂರ್ಪನಖಾ ವಿವಾಹ, ಅಹಿರಾವಣ, ಮಹಿರಾವಣ ಎಂಬ ಕಥಾಭಾಗ ಪ್ರದರ್ಶನ ಇರಲಿದೆ. ಇದೇ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿ ಅವರನ್ನು ಉದ್ಯಮಿ ಮನೋಹರ ಶೆಟ್ಟಿ ಕೋಡಿಬೆಟ್ಟು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹವ್ಯಾಸಿ ಕಲಾವಿದೆ ಹಾಗೂ ಉಪನ್ಯಾಸಕಿ ಕವಿತಾ ಯಾದವ್ ಭಾಗವಹಿಸುವರು ಎಂದು ಯಕ್ಷಮಿತ್ರರು ಕೈಕಂಬದ ಪ್ರಕಟಣೆ ತಿಳಿಸಿದೆ.