ಬಂಟ್ವಾಳ

ಪದವು ದೇವಳ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆಬ್ರವರಿ 19 ರಿಂದ  24ರವರೆಗೆ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಕ್ಷೇತ್ರದಲ್ಲಿ ಬಿಡುಗಡೆಗೊಂಡಿತು.ಶ್ರೀಧಾಮದ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಅಳದಂಗಡಿ ಅರಮನೆಯ

ಡಾ.ಪದ್ಮಪ್ರಸಾದ್ ಅಜಿಲರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಮೋಹನದಾಸ ಸ್ವಾಮೀಜಿ ಆಶ್ರೀವರ್ಚನ ನೀಡಿ ನಮ್ಮೊಳಗಿನ ಶತ್ರುತ್ವವನ್ನು ನಾಶಮಾಡಿ ಸದ್ಗುಣಗಳನ್ಮು ಬೆಳೆಸಿಕೊಳ್ಳಲು ಧರ್ಮಕಾರ್ಯಗಳು ಪ್ರೇರಣೆಯಾಗುತ್ತದೆ. ವೈಯಕ್ತಿಕ ಸಂಪತ್ತಿನ ಆಕರ್ಷಣೆಗಿಂತ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳ ಆಕರ್ಷಣೆ ಹೆಚ್ಚಾದಾಗ  ನಾಡು ಸುಭೀಕ್ಷೆಯಾಗುತ್ತದೆ. ಪದವು ದೇವಳದ ಬ್ರಹ್ಮಕಲಶ ಸರ್ವರ ಸಹಕಾರದಿಂದ ನಾಡಿಗೆ ಉತ್ತಮ ಸಂದೇಶ ಕೊಡುವ ಉತ್ಸವವಾಗಲಿ ಎಂದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿ ಮಾತನಾಡಿ ಊರಿನ ಪ್ರತೀ ಭಕ್ತಾದಿಗಳು ದೇವಸ್ಥಾನದ ಸೇವೆಯನ್ನು ತಮ್ಮ ಕರ್ತವ್ಯವೆಂದು ಭಾವಿಸಿ ನಿರ್ವಹಿಸಿದರೆ ಅದು ತಾಯಿಗೆ ಸಮರ್ಪಣೆಯಾಗುತ್ತದೆ, ಸರ್ವರು ಸಂಘಟಿತರಾಗಿ ಬ್ರಹ್ಮಕಲಶದ ಯಶಸ್ವಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.

ಜಾಹೀರಾತು

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉಧ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಂ ಪೂಜಾರಿ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.ಇದೇ ಸಂದರ್ಭ ಸಾಕ್ಷಾತ್ ಶೆಟ್ಟಿ ಚಾಲೆಂಜರ್ಸ್ ಫೌಂಡೇಶನ್ ನಿರ್ಮಾಣದ ಮಮತಾ ಸಾಕ್ಷಾತ್ ಶೆಟ್ಟಿ ಸಾಹಿತ್ಯದ  ಮಧುರಾಜ್ ಗುರುಪುರ ಮತ್ತು ಚೈತ್ರಾ ಗಾಣಿಗ ಕಲ್ಲಡ್ಕ ಹಾಡಿರುವ ಜಿ. ಎಸ್.ಗುರುಪುರ ಸಹಕಾರದಲ್ಲಿ ಮೂಡಿಬಂದಿರುವ ಪದವುದಪ್ಪೆಗ್ ಸುಗಿಪುದಾರತಿ ಗೀತೆಯನ್ನು ಡಾ.ಮೋಹನ ಆಳ್ವ ಬಿಡುಗಡೆಗೊಳಿಸಿದರು. ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಬುಳೇರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಸಮಿತಿಗಳ ಪ್ರಮುಖರಾದ ಬಾಬು ಪೂಜಾರಿ ಕೌಡೇಡಿ, ಸುಲೋಚನಾ ಜಿ.ಕೆ.ಭಟ್,  ಭೋಜರಾಜ ಶೆಟ್ಟಿ ಕೊರಗಟ್ಟೆ, ಅಮ್ಮು ರೈ ಹರ್ಕಾಡಿ, ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು,  ವಸಂತ ಶೆಟ್ಟಿ ಅರ್ಕೆದೊಟ್ಟು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಾಲ ಅಂಚನ್ ಆಲದಪದವು ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಸಾಲ್ಯಾನ್ ಕಲಸಡ್ಕ ವಂದಿಸಿದರು. ರಂಗಕಲಾವಿದ ಎಚ್ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು. ಮಾಗಣೆಯ ಅಪಾರ ಭಕ್ತಾದಿಗಳು ಪಾಲ್ಗೊಂಡರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.