ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿಯ 96ರ ಹರೆಯದ ಕಜೆ ಈಶ್ವರ ಭಟ್ಟರ ಬರಹಗಳ ಸಂಗ್ರಹದ ಪುಸ್ತಕವನ್ನು ಅವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಂಧು ಮಿತ್ರರ ಸಮ್ಮುಖ ಬಿಡುಗಡೆ ಮಾಡಲಾಯಿತು. ಅಂತರ್ನಾದ ಎಂದ ಪುಸ್ತಕವನ್ನು ಅವರು ಬರೆದಿದ್ದಾರೆ. ಅಮಾನಿ ಎಂಬ ಕಾವ್ಯನಾಮದಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಸಣ್ಣ ಅಂಕಣಗಳನ್ನು ಬರೆಯುತ್ತಿದ್ದ ಅವರು ಇತ್ತೀಚೆಗೆ ಬರೆದ ಕೆಲವು ಇಂಗ್ಲೀಷಿನ ಬರಹಗಳೂ ಈ ಪುಸ್ತಕದಲ್ಲಿ ಸೇರ್ಪಡೆಗೊಂಡಿವೆ.ಡಾ.ಸಂಧ್ಯಾ ಕಾವೇರಿ ಸ್ವಾಗತಿಸಿದರು. ಸಾವಿತ್ರಿ ಎಮ್ ಭಟ್ ಮುಳಿಯ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಭಟ್ ಕಿಲಿಂಗಾರು ಅತಿಥಿಗಳಾಗಿ ಭಾಗವಹಿಸಿದ್ದರು. ಜಯರಾಮಕೃಷ್ಣ ಕಜೆ ವಂದಿಸಿದರು. ಜಯೀಶ ಕಜೆ ಕಾರ್ಯಕ್ರಮ ನಿರೂಪಿಸಿದರು.