ಬಂಟ್ವಾಳ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ವೈಭವದ ರಥೋತ್ಸವವನ್ನು ಸೇರಿದ್ದ ಸಾವಿರಾರು ಮಂದಿ ಕಣ್ತುಂಬಿಕೊಂಡರು. ಈ ವೇಳೆ ಸಿಡಿಮದ್ದುಗಳ ಚಿತ್ತಾಕರ್ಷಕ ಪ್ರದರ್ಶನವೂ ನಡೆಯಿತು.ಧ್ವಜಾರೋಹಣ, ಉತ್ಸವಬಲಿ, ಕಟ್ಟೆಪೂಜೆಬಳಿಕಬಟ್ಟಲುಕಾಣಿಕೆ ನೀಡುವುದರೊಂದಿಗೆ ಜಾತ್ರೆ ಆರಂಭಗೊಂಡಿತ್ತು. ನಿತ್ಯೋತ್ಸವಗಳ ಜೊತೆಗೆ ಕೇಪುವಿನಿಂದಶ್ರೀಮಲರಾಯದೈವದಭಂಡಾರಆಗಮಿಸಿ ಜಾತ್ರೆ ವೈಭವವನ್ನು ಇಮ್ಮಡಿಗೊಳಿಸಿತ್ತು. ಪ್ರತಿದಿನ ವಿವಿಧ ಉತ್ಸವಗಳು ನಡೆದ ಬಳಿಕ ಗುರುವಾರ ರಾತ್ರಿ ಮಹಾರಥೋತ್ಸವನಡೆಯಿತು. ಬೆಳಗ್ಗೆದರ್ಶನಬಲಿ, ರಾಜಾಂಗಣದಬಟ್ಲುಕಾಣಿಕೆ, ಪ್ರಸಾದವಿತರಣೆ,ಕಡಂಬುವಿನಿಂದಕೊಡಮಣಿತ್ತಾಯದೈವದಭಂಡಾರಕ್ಷೇತ್ರಕ್ಕೆಆಗಮನ, ರಾತ್ರಿಮಹಾರಥೋತ್ಸವಬೀದಿಮೆರವಣಿಗೆ, ಶಯನೋತ್ಸವನಡೆಯಿತು. ಅವಭೃತ ಸ್ನಾನ ಕೊಡಂಗಾಯಿಗೆ ಸವಾರಿ ಧ್ವಜಾವರೋಹಣ, ಸಂಪ್ರೋಕ್ಷಣೆ ಬಳಿಕ ಕೇಪುವಿನ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ನಡೆಯಲಿದೆ.