ಬಂಟ್ವಾಳ: ಹವ್ವಾ ಜುಮ್ಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಗಳ್ ಅವರು ಮೆಲ್ಕಾರಿನ ಸುಲ್ತಾನ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಒ) ಪಾಣೆಮಂಗಳೂರು ಶಾಖೆಯ ನೂತನ ಕಚೇರಿಯಾದ ಸ್ನೇಹ ಸ್ಟಡಿ ಸೆಂಟರ್ ನ್ನು ಉದ್ಘಾಟಿಸಿದರು.
ಜಮಾಅತೆ ಇಸ್ಲಾಮೀ ಹಿಂದ್(ಜೆ.ಐ.ಹೆಚ್) ದ.ಕ. ಜಿಲ್ಲಾ ಸಂಚಾಲಕ ಸಈದ್ ಇಸ್ಮಾಯೀಲ್ ಮಾತನಾಡಿ, ಎಸ್.ಐ.ಓ ನಿಂದ ತರಬೇತಿಗೊಂಡ ವಿಧ್ಯಾರ್ಥಿ ಗಳು ಸಮಾಜಕ್ಕೆ ಮಾರ್ಗದರ್ಶಕರಾಗುತ್ತಾರೆ ಎಂದರು. ಜೆ.ಐ.ಹೆಚ್.ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್.ಯು. ಸಮಾರೋಪ ನುಡಿಗಳನ್ನಾಡುತ್ತ, ಸಂಘಟನೆಯ ಧ್ಯೇಯದೊಂದಿಗೆ ಮುನ್ನುಗ್ಗಿ ಯುವಕರು ಕಾರ್ಯಪ್ರವೃತ್ತರಾಗಬೇಕು ಎಂದು ಕರೆಯಿತ್ತರು. ಈ ಸಂದರ್ಭ ಅತಿಥಿಗಳಾಗಿ ಭಾಗವಹಿಸಿದ್ದ ಜೆ.ಐ.ಹೆಚ್. ಪಾಣೆಮಂಗಳೂರು ಶಾಖಾಧ್ಯಕ್ಷ ಮುಖ್ತಾರ್ ಅಹ್ಮದ್, ಎಸ್.ಐ.ಓ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ದಾನಿಶ್ ಚೆಂಡಾಡಿ ಮತ್ತು ಸಮಾಜ ಸೇವಕ ಶರೀಫ್ ಸಾದ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಸಫ್ವಾನ್ ಬೋಳಂಗಡಿ ಕಿರಾಅತ್ ಪಠಿಸಿದರು. ಎಸ್.ಐ.ಓ. ಪಾಣೆಮಂಗಳೂರು ಘಟಕಾಧ್ಯಕ್ಷ ಮುತಹ್ಹರ್ ಬೋಳಂಗಡಿ ಧನ್ಯವಾದವಿತ್ತರು. ಸಲ್ವಾನ್ ಬೋಳಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು.
inauguration ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕಿನ 2023-24 ಮತ್ತು 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ…
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…