ಬಂಟ್ವಾಳ: ಕುಂಬಾರರ ಗುಡಿಕೈಗಾರಿಕೆ ಸಹಕಾರ ಸಂಘದ ಕುಂಬಾರಿಕಾ ಉತ್ಪನ್ನಗಳ ಮಾರಾಟದ ಮೂರನೇ ಮಳಿಗೆಯನ್ನು ಜಿಲ್ಲಾ ಕೈಗಾರಿಕಾ ಸಂಘದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಉದ್ಘಾಟಿಸಿದರು.
ಬಿ.ಸಿ.ರೋಡಿನ ಅಚ್ಚುತ ಕಾಂಪ್ಲೆಕ್ಸ್ ನಲ್ಲಿ ಸಂಸ್ಥೆಯ ಸ್ವಂತ ಕಟ್ಟಡದಲ್ಲಿ ಆರಂಭಗೊಂಡ ಮಳಿಗೆ ಉತ್ಪನ್ನಗಳನ್ನು ವೀಕ್ಷಿಸಿ ಮಾತನಾಡಿದ ಅವರು ಕುಂಬಾರಿಕಾ ಉತ್ಪನ್ನಗಳ ತಯಾರಿಗೆ ಇರುವ ಶ್ರಮ ಅರಿತುಕೊಳ್ಳಬೇಕಾಗಿದ್ದು, ಇದಕ್ಕೆ ಸಾರ್ವಜನಿಕರ ಪ್ರೋತ್ಸಾಹ ಅಗತ್ಯ ಎಂದರು. ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಲ್ಲಾಲ್ ಮಾತನಾಡಿ, ಮಾರಾಟಕ್ಕೆ ಇರುವ ಶ್ರಮ ಹಾಗೂ ಉತ್ಪನ್ನಗಳ ನಿರ್ವಹಣೆ ಮಹತ್ವದ್ದಾಗಿದೆ, ಇದಕ್ಕೆ ಪ್ರೋತ್ಸಾಹ ಅಗತ್ಯವಿದ್ದು, ಸಮುದಾಯದಲ್ಲಿ ಕುಂಬಾರಿಕೆ ನಡೆಸುವವರಿಗೆ ಸಹಕಾರ ನೀಡುವುದಾಗಿ ಹೇಳಿದರು.
ಕೆ.ಐ.ಒ.ಸಿ.ಎಲ್. ನಿವೃತ್ತ ಅಭಿಯಂತರ ಲೋಕನಾಥ ಡಿ, ಕೆನರಾ ಬ್ಯಾಂಕ್ ನಿವೃತ್ತ ಸೀನಿಯರ್ ಮೆನೇಜರ್ ಸುಂದರ್ ಬಿ, ಪುರಸಭಾ ಸದಸ್ಯ ಹರಿಪ್ರಸಾದ್, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಾಜಿ ಅಧ್ಯಕ್ಷ ಬಿ.ಎಸ್.ಕುಲಾಲ್, ಕಾಯಕ ಸಮಾಜದ ಕರಿಸಿದ್ದಪ್ಪ ಕುಂಬಾರ, ಎಲ್.ಐಸಿ ಉಪಪ್ರಧಾನ ವ್ಯವಸ್ಥಾಪಕ ಸೋಮಸುಂದರ್, ಮಾಣಿ ಕುಲಾಲ ಸಂಘ ಗೌರವಾಧ್ಯಕ್ಷ ರಾಮಚಂದ್ರ ಮಾಸ್ತರ್, ಪುತ್ತೂರು ಕುಲಾಲ ಸಂಘದ ಅಧ್ಯಕ್ಷ ಕೃಷ್ಣಪ್ಪ ಕೆ, ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ, ಉಪಾಧ್ಯಕ್ಷ ದಾಮೋದರ ವಿ, ಸಂಘದ ನಿರ್ದೇಶಕರು, ಹಾಗೂ ಕಚೇರಿ ಸಿಬಂದಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ನಾರಾಯಣ ಕುಲಾಲ್ ವಂದಿಸಿದರು.