ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಕೇದಿಗೆ ಶ್ರೀ ವೀರಭದ್ರ ದೇವರು, ನಾಲ್ಕೈತ್ತಾಯ, ಪಂಜುರ್ಲಿ, ಮಹಾಂಕಾಳಿ ದೈವಂಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರ ಸಂಜೆ ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಿಂದ ಕ್ಷೇತ್ರದವರೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಮೊಗರ್ನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ. ಜನಾರ್ಧನ ಭಟ್ ಚಾಲನೆ ನೀಡಿದರು. ಈ ಸಂದರ್ಭ ಕೇದಿಗೆ ಶ್ರೀವೀರಭದ್ರ ದೇವಸ್ಥಾನ ಮತ್ತು ಪರಿವಾರ ನಾಲ್ಕೈತ್ತಾಯ, ಪಂಜುರ್ಲಿ, ಮಹಾಂಕಾಳಿ ಹಾಗೂ ದೈವಂಗಳ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್. ಪ್ರಕಾಶ್ ಕಾರಂತ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್, ಹೊರೆಕಾಣಿಕೆ ಸಮಿತಿ ಸಂಚಾಲಕ ಪುರುಷೋತ್ತಮ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಘು ಸಪಲ್ಯ ನರಿಕೊಂಬು, ಸಂಚಾಲಕ ಎನ್.ಪದ್ಮನಾಭ ಮಯ್ಯ ಏಲಬೆ, ಉಪಾಧ್ಯಕ್ಷ ಉಮೇಶ್ ಬೋಳಂತೂರು, ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾ.ಪಂ.ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಪ್ರಮುಖರಾದ ಕೃಷ್ಣಪ್ಪ ಗಾಣಿಗ ಮಾಣಿಮಜಲು, ರಮೇಶ ಬೋರುಗುಡ್ಡೆ, ಪ್ರೇಮನಾಥ ಶೆಟ್ಟಿ ಅಂತರ, ಲಕ್ಷ್ಮಣ ಪೂಜಾರಿ, ಮಹೇಶ್ ರಾಯಸ, ಶ್ರೀಷ ರಾಯಸ, ಯಶೋಧರ ಕರ್ಬೆಟ್ಟು, ಜಿನರಾಜ ಕೋಟ್ಯಾನ್, ರಾಜ ಬಂಟ್ವಾಳ ಸಹಿತ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ನಾನಾ ಪದಾಧಿಕಾರಿಗಳು, ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.
14ರಂದು ಗುರುವಾರ ಹೋಮ ಹವನ ಸಹಿತ ವಿವಿಧ ಧಾರ್ಮಿಕ ಮತ್ತು ವೈದಿಕ ಕಾರ್ಯಕ್ರಮಗಳು ನಡೆಯುವುದು. 15ರಂದು ಶುಕ್ರವಾರ ಬೆಳಗ್ಗೆ ಘಂಟೆ 10.53ಕ್ಕೆ ನವೀಕೃತ ದೇವಸ್ಥಾನದಲ್ಲಿ ದೇವರ ಪ್ರತಿಷ್ಠೆ – ಬ್ರಹ್ಮಕಲಶೋತ್ಸವ ವಿವಿಧ ವೈದಿಕ ಮತ್ತು ಧಾರ್ಮಿಕ ವಿ ವಿಧಾನಗಳು ವಾಸುದೇವ ಕಾರಂತರ ನೇತೃತ್ವದಲ್ಲಿ ನಡೆಯಲಿದೆ. ಬ್ರಹ್ಮಕಲಶೋತ್ಸವದ ಬಳಿಕ ಬೆಳಗ್ಗೆ 11,30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ವಸತಿ ಸಚಿವ ಬಿ. ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ.ಪ್ರಭಾಕರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಭಾಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ.ಸದಸ್ಯರಾದ ಕಮಲಾಕ್ಷಿ ಕೆ.ಪೂಜಾರಿ, ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು. ಅದೇ ದಿನ ರಾತ್ರಿ ೬ರಿಂದ ನಾಲ್ಕೈತ್ತಾಯ, ಪಂಜುರ್ಲಿ ದೈವಗಳ ನೇಮೋತ್ಸವ ನಡೆಯುವುದು ಎನ್. ಪ್ರಕಾಶ್ ಕಾರಂತ ನರಿಕೊಂಬು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದು, ಜಗನ್ನಾಥ ಬಂಗೇರ ನಿರ್ಮಲ್ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿದ್ದಾರೆ. ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷರುಗಳಾದ ರಘುನಾಥ ಸೋಮಯಾಜಿ ಎರಕಳ, ರಘು ಸಪಲ್ಯ ನರಿಕೊಂಬು. ಸಂಚಾಲಕ ಎನ್. ಪದ್ಮನಾಭ ಮಯ್ಯ ಏಲಬೆ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಗಾಣಿಗ ಮಾಣಿಮಜಲು, ಕೋಶಾಕಾರಿ ರಮೇಶ್ ಬೋರುಗುಡ್ಡೆ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷರಾದ ಯಜ್ಞನಾರಾಯಣ ಹೇರಳೆ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಅಂತರ, ಕೋಶಾಕಾರಿಯಾಗಿ ಲಕ್ಷ್ಮಣಪೂಜಾರಿ ಕಲ್ಯಾಣಾಗ್ರಹಾರ ಕಾರ್ಯನಿರ್ವಹಿಸುತ್ತಿದ್ದಾರೆ