ಬಂಟ್ವಾಳ

2021 ಆರಂಭದಲ್ಲೇ ಸಂಭ್ರಮ ಮಳಿಗೆಯ ಬಂಪರ್ ಆಫರ್ – WEDDING COMBO….

ಬಂಟ್ವಾಳ: 2020ರ ಹಳೆಯ ಮೆಲುಕುಗಳೊಂದಿಗೇ ಹೊಸ ವರ್ಷಕ್ಕೆ ಕಾಲಿಟ್ಟ ದಿನವೇ ಕಲ್ಲಡ್ಕ ಮತ್ತು ಕಳೆದ ಎರಡು ತಿಂಗಳ ಮೊದಲು ಬಿ.ಸಿ.ರೋಡಿನ ತಲಪಾಡಿಯಲ್ಲಿ ಆರಂಭಗೊಂಡ ವೈವಿಧ್ಯಮಯ ಎಲೆಕ್ಟ್ರಾನಿಕ್ ಮತ್ತು ಫರ್ನೀಚರ್ ಗಳನ್ನು ಹೊಂದಿರುವ ಮಳಿಗೆಯಾದ ಸಂಭ್ರಮ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನೀಚರ್ಸ್ ಗ್ರಾಹಕರಿಗೆ ಅದರಲ್ಲೂ ಜನವರಿಯಲ್ಲಿ ವಿವಾಹವಾಗುವ ಹಾಗೂ ಹೊಸ ಮನೆಯನ್ನು ಪ್ರವೇಶಿಸುವವರಿಗೆ ಬಂಪರ್ ಕೊಡುಗೆ ನೀಡುವ ಮೂಲಕ 2021ಕ್ಕೆ ಸಂಭ್ರಮದ ಮುನ್ನುಡಿ ಬರೆದಿದೆ.ವೆಡ್ಡಿಂಗ್ ಕೊಂಬೊ ಎಂಬ ಹೆಸರಲ್ಲಿ ಆರಂಭಿಸಿರುವ ಈ ಆಫರ್ 2021ರ ಸ್ಪೆಶಲ್ ಆಗಿರುತ್ತದೆ ಎಂದು ಮಾಲೀಕ ಗಿರೀಶ್ ನೆಟ್ಲ ತಿಳಿಸಿದ್ದಾರೆ. ಕಲ್ಲಡ್ಕ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಇರುವ ಸಂಭ್ರಮವೀಗ ಬಿ.ಸಿ.ರೋಡ್ ತಲಪಾಡಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೂ ವ್ಯವಹಾರ ನಡೆಸುತ್ತಿದೆ. ಎರಡೂ ಕಡೆಗಳಲ್ಲಿ ವಿಶಾಲವಾದ ಶೋರೂಂ, ಎಲೆಕ್ಟ್ರಾನಿಕ್ ಮತ್ತು ಫರ್ನೀಚರ್ ವೈವಿಧ್ಯಮಯ ಸಂಗ್ರಹಗಳನ್ನು ಹೊಂದಿರುವ ಸಂಭ್ರಮ ದಿನವಿಡೀ ಗ್ರಾಹಕರಿಗಾಗಿ ತೆರೆದಿರುತ್ತದೆ.

ಏನಿದು ವೆಡ್ಡಿಂಗ್ ಕೊಂಬೊ? ಸಾಮಾನ್ಯವಾಗಿ ವಿವಾಹವಾಗಿ ಹೊಸ ಬದುಕು ಪ್ರವೇಶಿಸುವವರಿಗೆ, ಹೊಸ ಮನೆಯನ್ನು ಪ್ರವೇಶಿಸುವವರಿಗೆ ಗೃಹೋಪಯೋಗಿ ವಸ್ತುಗಳ ಅವಶ್ಯಕತೆಯೂ ಇರುತ್ತದೆ. ಇದಕ್ಕಾಗಿಯೇ ನಾನಾ ಮಳಿಗೆಗಳನ್ನು ತಿರುಗಾಡುತ್ತಾ, ಸಮಯವನ್ನು ವ್ಯರ್ಥ ಮಾಡುವ ಬದಲು ಒಂದೇ ಸೂರಿನಡಿ ಎಲ್ಲವನ್ನೂ ಪಡೆದುಕೊಳ್ಳಲು ಸುಲಭವಾಗುವಂತೆ ಮತ್ತು ಆಕರ್ಷಕ ಆಫರ್ ದರಪಟ್ಟಿಯಲ್ಲೇ ಇದನ್ನು ಒದಗಿಸಲು ಈ ವೆಡ್ಡಿಂಗ್ ಕೊಂಬೊ ಆಯೋಜಿಸಿದ್ದೇವೆ. ಜನವರಿ 2021ರಲ್ಲಿ ವಿವಾಹವಾಗುವವರಿಗೆ 99,999 ರೂಗಳಿಗೆ ಈ ಎಲ್ಲಾ ಅವಶ್ಯಕ ಉಪಕರಣಗಳನ್ನು ಖರೀಸಿದಬಹುದು ಎಂದು ಹೇಳುತ್ತಾರೆ ಗಿರೀಶ್.

99,999ಕ್ಕೆ ಏನೆಲ್ಲಾ ಸಿಗುತ್ತೆ:99,999 ರೂಪಾಯಿಗೆ ದೊರಕುವ ಐಟಂಗಳು ಇವು. 32″ ಎಲ್ ಇ ಡಿ ಟಿವಿ, ರೆಫ್ರಿಜರೇಟರ್, ‌ಸ್ಟಾಂಡ್,  ಡೈನಿಂಗ್ ಟೇಬಲ್, ಕಪಾಟು, ಮಂಚ, ಬೆಡ್, ದಿಂಬು, ಸೋಫಾ,  ಟೀಪಾಯಿ ,ಮಿಕ್ಸಿ ,ಕುಕ್ಕರ್, ಗ್ಯಾಸ್ ಸ್ಟಾವ್, ಗ್ರೈಂಡರ್, ವಟರ್ ಪ್ಯೂರಿಫಯರ್, ಇಸ್ತ್ರಿಪೆಟ್ಟಿಗೆ, ಏರ್  ಕೂಲರ್ ,3 ಪಿಸ್ ಸೆಟ್

ಜಾಹೀರಾತು
2 / 7

ಸಂಭ್ರಮದ ವಿಜೇತರು: ಸಂಭ್ರಮ ಬಿ.ಸಿ.ರೋಡ್ ಮಳಿಗೆ ಆರಂಭಗೊಂಡ ವೇಳೆ ಖರೀದಿಯ ಮೇಲೆ ಲಕ್ಕಿ ಡ್ರಾ ಆಯೋಜಿಸಲಾಗಿತ್ತು.  ಅದರ ವಿಜೇತರು ಇವರು. ಚಿನ್ನದ ನಾಣ್ಯ – ಹುಸೈನ್ ಸಜಿಪ, ದಾಮೋದರ ಸಿದ್ಧಕಟ್ಟೆ, ದಿಶಾ ಪೂಜಾರಿ ಬರಿಮಾರ್ (ಮೊದಲ ಮೂರು ಬಹುಮಾನಗಳು) ಕಟ್ಟಡದ ಮಾಲೀಕರಾದ ಎ.ಬಿ.ಶೆಟ್ಟಿ ಮತ್ತು ಜೋಯೆಲ್ ಡಿಕುನ್ಹ ಅಮ್ಟೂರು ಬಹುಮಾನಗಳನ್ನು ವಿಜೇತರಿಗೆ ವಿತರಿಸಿದರು. ಈ ಸಂದರ್ಭ ಪಾಲುದಾರರಾದ ಗಿರೀಶ್ ನೆಟ್ಲ ಹಾಗೂ ಸಂಭ್ರಮದ ಸಿಬ್ಬಂದಿ ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.