ಬಂಟ್ವಾಳ: ಧರ್ಮ ಜಾಗರಣ ಪ್ರತಿಷ್ಠಾನ (ರಿ)ದ 20ನೇ ವಾರ್ಷಿಕೋತ್ಸವ ಕುಕ್ಕಾಜೆಯ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನಡೆಯಿತು.
ಬೆಳಿಗ್ಗೆ ಗಣಹೋಮ, ಚಂಡಿಕಾಹೋಮ ಸಂಜೆ ಕ್ಷೇತ್ರಾಧಿಪತಿ ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಪ್ರಭಾವಳಿಯನ್ನು ಕುಕ್ಕಾಜೆ ಪಂಚಾಯತ್ ವಠಾರದಿಂದ ಮೆರವಣಿಗೆ ಮೂಲಕ ಕೊಂಡೊಯ್ದು ಎಡನೀರು ಮಠದ ಶ್ರೀ.ಸಚ್ಚಿದಾನಂದ ಭಾರತಿ ಸ್ವಾಮೀಜಿಯವರಿಂದ ಧಾರ್ಮಿಕ ಪೂಜೆ ನೆರವೇರಿಸಿ ಅರ್ಪಿಸಕಾಯಿತು. ಪುಣ್ಯಪ್ರದವಾದ ದೇವರ ಕೆಲಸದಂತಹ ಸತ್ಕಾರ್ಯಗಳಿಂದ ಸತ್ಕರ್ಮ, ಸತ್ಫಲಗಳು ಪ್ರಾಪ್ತಿಯಾಗುತ್ತವೆ ಎಂದು ಶ್ರೀಗಳು ಆಶೀರ್ವಚನಗೈದರು.ವೇದಿಕೆಯಲ್ಲಿ ಎಡನೀರು ಮಠದ ಮ್ಯಾನೇಜರ್, ನಿವೃತ್ತ ಪ್ರಾಂಶುಪಾಲರಾದ ರಾಜೇಂದ್ರ ಕಲ್ಲೂರಾಯ, ಕೆಮ್ಮಿಂಜೆ ತಂತ್ರಿ ಬ್ರಹ್ಮಶ್ರೀ ನಾಗೇಶ್ ತಂತ್ರಿ ಪ್ರತಿಷ್ಠಾನದ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಉಪಸ್ಥಿತರಿದ್ದರು. ಸಾಕ್ಷಿ ಮತ್ತು ಪ್ರಾಪ್ತಿ ಪ್ರಾರ್ಥಿಸಿದರು. ಸತೀಶ್ ಕುಕ್ಕಾಜೆಬೈಲು ಸ್ವಾಗತಿಸಿದರು,ಜಗದೀಶ್ ನೋಳ ಧನ್ಯವಾದ ಸಲ್ಲಿಸಿದರು.ನ್ಯಾಯವಾದಿ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಸಂಜೆ ಬಲಮುರಿ ಗಣಪತಿ ಮತ್ತು ಶ್ರೀ.ಲಕ್ಷ್ಮೀ ನರಸಿಂಹ ದೇವರಿಗೆ ರಂಗಪೂಜೆ ನೆರವೇರಿಸಿ ಮಹಾಪೂಜೆ ನಂತರ ಅನ್ನಪ್ರಸಾದ ನೀಡಲಾಯಿತು.
ಅಖಂಡ ಭಜನಾ ಸಪ್ತಾಹದ ಸವಿನೆನಪಿಗಾಗಿ ಶ್ರೀ.ಲಕ್ಷ್ಮೀನರಸಿಂಹ ಭಜನಾ ಮಂಡಳಿ ವತಿಯಿಂದ ಮಾರನೇ ದಿನ ಶನಿವಾರ ಸೂರ್ಯೋದಯದಿಂದ ಆಹೋರಾತ್ರಿ ಏಕಾಹ ಭಜನೆ ಆರಂಭವಾಗಿ ಮಧ್ಯಾಹ್ನ ಶನೀಶ್ವರ ಪೂಜೆ, ಮಹಾಪೂಜೆ,ಅನ್ನಪ್ರಸಾದ, ಸಂಜೆ ರಂಗಪೂಜೆ, ಮಹಾಪೂಜೆ ಅನ್ನಪ್ರಸಾದ ವಿತರಿಸಿ ಭಾನುವಾರ ಸೂರ್ಯೋದಯಕ್ಕೆ ಭಜನಾ ಮಂಗಳೋತ್ಸವವಾಗಿ ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಸೀಯಾಳಾಭಿಷೇಕ ನಂತರ ಸತ್ಯನಾರಾಯಣ ಪೂಜೆ ಅನ್ನಪ್ರಸಾದ ನೀಡಿ ಕಾರ್ಯಕ್ರಮ ಮುಕ್ತಾಯವಾಯಿತು.ಸುಮಾರು 15 ವಿವಿಧ ಭಜನಾ ಮಂಡಳಿಗಳು ಭಾಗವಹಿಸಿದ್ದವು.