ಕಲ್ಲಡ್ಕ

ಕಲ್ಲಡ್ಕದಲ್ಲಿ ಘಟನೆ: ಲಿಫ್ಟ್ ನಲ್ಲಿ ಎರಡು ಗಂಟೆಗಳ ಕಾಲ ಸಿಲುಕಿದ ಬಾಲಕಿಯರು

ನಾಲ್ವರು ಬಾಲಕಿಯರು ತಾಂತ್ರಿಕ ಅಡಚಣೆಯಿಂದ ಲಿಫ್ಟ್ ನಲ್ಲೇ ಸುಮಾರು 2 ಗಂಟೆ ಬಾಕಿಯಾಗಿದ್ದ ಘಟನೆ ಕಲ್ಲಡ್ಕದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸಂಜೆ ಸುಮಾರು 5.30ರ ವೇಳೆ ಕಲ್ಲಡ್ಕದ ಖಾಸಗಿ ಅಪಾರ್ಟ್ ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ. ನಾಲ್ವರು ಬಾಲಕಿಯರು ಲಿಫ್ಟ್ ನಲ್ಲಿರುವಾಗಲೇ ವಿದ್ಯುತ್ ಸಂಪರ್ಕ ಹೋಗಿದೆ. ಬಳಿಕ ವಿದ್ಯುತ್ ಬಂದರೂ ಲಿಫ್ಟ್ ಚಾಲೂ ಆಗಲಿಲ್ಲ. ಕೆಲಹೊತ್ತಿನ ಬಳಿಕವೂ ಹೀಗಾದಾಗ ಹೆದರಿದ ಬಾಲಕಿಯರು ಬೊಬ್ಬೆ ಹಾಕಿದರು. ಈ ವೇಳೆ ಸ್ಥಳೀಯರು ಒಟ್ಟುಗೂಡಿ ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಆಗಲಿಲ್ಲ. ಇದೇ ಹೊತ್ತಿಗೆ ಲಿಫ್ಟ್ ಕಂಪನಿಯವರನ್ನು ಬರಹೇಳಲಾಯಿತು. ಅಗ್ನಿಶಾಮಕದಳದವರಿಗೂ ಕರೆ ಮಾಡಲಾಯಿತು. ಈ ಕಾರ್ಯಾಚರಣೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಉಸಿರುಕಟ್ಟದಂತೆ ಸ್ಥಳೀಯರು ಲಿಫ್ಟ್ ಅರ್ಧ ತೆರೆದು ಗಾಳಿ ಬೀಸುವ ಉದ್ದೇಶದಿಂದ ಟೇಬಲ್ ಫ್ಯಾನ್ ಅನ್ನೂ ಹಿಡಿದರು. ಕಟ್ಟಡದ ಲಿಫ್ಟ್ ನ ಕೆಲಸ ಮಾಡಿದ ಸಂಬಂಧಿಸಿದ ಕಂಪೆನಿ ಯವರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು ಲಿಫ್ಟ್ ನ ತಾಂತ್ರಿಕ ದೋಷವನ್ನು ಸರಿಪಡಿಸಿದರು. ಸುಮಾರು 7.15 ಗಂಟೆಗೆ ಮಕ್ಕಳು ಯಾವುದೇ ಸಮಸ್ಯೆಯಿಲ್ಲದೆ ಹೊರಗೆ ಬರುವಂತೆ ಮಾಡಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts