ಬಂಟ್ವಾಳ: ಮಹಿಳಾ ಜ್ಞಾನ ವಿಕಾಸ ಕೇಂದ್ರ ಗಳ ಪ್ರೇರಣೆಯಿಂದ ಮಹಿಳಾ ಸಬಲೀಕರಣ, ಮಹಿಳೆಯರಲ್ಲಿ ಜಾಗೃತಿ ಮತ್ತು ಸಾಕ್ಷರತೆ ಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಮುಂಚೂಣಿಯಲ್ಲಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು. ಅವರು ಶ್ರೀ ಕ್ಷೇ.ಧ. ಗ್ರಾ. ಯೋ. ಬಿಸಿ ಟ್ರಸ್ಟ್ ಬಂಟ್ವಾಳ, ಸಿದ್ಧಕಟ್ಟೆ ವಲಯದ ಕರ್ಪೆ ಸನ್ನಿಧಿ ಮತ್ತು ಸಮೃದ್ಧಿ ಜ್ಞಾನ ವಿಕಾಸ ಕೇಂದ್ರಗಳ ಪ್ರಥಮ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ, ನಿವೃತ್ತ ಶಿಕ್ಷಕ ನಾರಾಯಣ್ ನಾಯಕ್ ಕಿನ್ನಾಜೆ ಅವರು ಮಾತನಾಡಿ , ಅಡುಗೆ ಮನೆಗೆ ಸೀಮಿತ ರಾಗಿದ್ದ ಮಹಿಳೆಯರು ರಾಜಕೀಯ, ವಾಣಿಜ್ಯ ಕ್ಷೇತ್ರ ಗಳಲ್ಲಿ ಗುರುತಿಸು ವಂತ ಸಾಧನೆ ಮಾಡುವಲ್ಲಿ ಧರ್ಮಸ್ಥಳದ ಇಂತಹ ಕಾರ್ಯಕ್ರಮಗಳ ಕೊಡುಗೆ ದೊಡ್ಡದು ಎಂದು ಅಭಿಪ್ರಾಯ ಪಟ್ಟರು. ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಅವರು ಉತ್ತಮ ಸರಕಾರ, ಆಡಳಿತ ನೀಡುವಲ್ಲಿ ಸುಶಿಕ್ಷಿತ, ಪ್ರಜ್ಞಾವಂತ ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದರು. ಆರೋಗ್ಯ ಶುಷ್ರೂ ಶಕಿ ಕುಸುಮ ಅಣ್ಣ ಳಿಕೆ, ವಲಯಾಧ್ಯಕ್ಷ ಸದಾನಂದ ಶೀತಲ್ ಶುಭಹಾರೈಸಿದರು.ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನಾ, ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ಸೇವಾ ಪ್ರತಿನಿಧಿ ಸರೋಜಾ ಉಪಸ್ಥಿತರಿದ್ದು ಕೇಂದ್ರದ ಸದಸ್ಯೆ ರಾಜೇಶ್ವರಿ ನಿರೂಪಣೆಯಲ್ಲಿ ಜ್ಯೋತಿ ಸ್ವಾಗತಿಸಿ ಕವಿತಾ ಧನ್ಯವಾದವಿತ್ತರು.