ಮೆಲ್ಕಾರ್ ರಿಕ್ಷಾ ಪಾರ್ಕಿನಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಫ್ರೀಝರ್ ಘಟಕದ ಲೋಕಾರ್ಪಣೆ
ಬಂಟ್ವಾಳ: ಎಸ್ಸೆಸ್ಸೆಫ್ ದ.ಕ ಜಿಲ್ಲಾ ಘಟಕದ ವತಿಯಿಂದ ನೀಡಿದ ಮೆಲ್ಕಾರ್ ಪರಿಸರಕ್ಕೆ ಬಹುಕಾಲದ ಬೇಡಿಕೆಯಾದ ಸಾರ್ವಜನಿಕ ಕುಡಿಯುವ ನೀರಿನ ಫ್ರೀಝರ್ ಘಟಕದ ಉದ್ಘಾಟನೆಯು ಸೋಮವಾರ ರಿಕ್ಷಾ ಪಾರ್ಕಿನ ಬದಿಯಲ್ಲಿ ನೆರವೇರಿತು.
ಎಸ್ಸೆಸ್ಸೆಫ್ ಬಂಟ್ವಾಳ ಅಧ್ಯಕ್ಷರಾದ ಸಿದ್ದೀಕ್ ಸಅದಿಯವರು ಉದ್ಘಾಟನೆಯನ್ನು ನೆರವೇರಿಸಿದರು.ದ.ಕ ಜಿಲ್ಲಾ ಎಸ್ಸೆಸ್ಸೆಫ್ ಕಾರ್ಯದರ್ಶಿಯವರಾದ ರಶೀರಿ ಹಾಜಿ ವಗ್ಗ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಪ್ರಧಾನ ಕಾರ್ಯದರ್ಶಿಯವರಾದ ಮೌಸೂಫ್ ಅಬ್ದುಲ್ಲಾ, ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ, ದ.ಕ. ಜಿಲ್ಲಾ ವೆಸ್ಟ್ ಝೋನ್‌ನ ಉಪಾಧ್ಯಕ್ಷರಾದ ಅಕ್ಬರ್ ಅಲಿ ಮದನಿ, ಸಿನಾನ್ ಸಖಾಫಿ, ಪುರಸಭೆ ಉಪಾಧ್ಯಕ್ಷರಾದ ಜೆಸಿಂತಾ ಡಿಸೋಜಾ, ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಪುರಸಭಾ ನಾಮ ನಿರ್ದೇಶನ ಸದಸ್ಯರಾದ ಸಚಿನ್ ಮೆಲ್ಕಾರ್, ಆರ್. ಆರ್. ಕಮರ್ಷಿಯಲ್ ಸೆಂಟರ್‌ನ ಮಾಲಕರೂ ಮತ್ತು ಫ್ರೀಝರ್ ಘಟಕಕ್ಕೆ ನೀರಿನ ಸೌಲಭ್ಯವನ್ನು ಒದಗಿಸಿಕೊಟ್ಟ ರಾಮ್‌ರಾಜ್ ರಾವ್, ಎನ್.ವಿ. ಡಿಜಿಟಲ್ಸ್ ಮೆಲ್ಕಾರ್‌ನ ಮಾಲಕರಾದ ನವೀನ್ ಪ್ರಕಾಶ್, ಬಿ.ಜೆ.ಪಿ ಪ್ರಮುಖರಾದ ರೂಪೇಶ್ ಆಚಾರ್ಯ, ಪ್ರಮುಖರಾದ ಅಲ್ತಾಫ್ ಕೊಳಕೆ, ಶಬೀರ್ ಬೇಂಕ್ಯ ಉಪಸ್ಥಿತರಿದ್ದರು. ರಿಕ್ಷಾ ಚಾಲಕ ಮಾಲಕರ ಸಂಘ ಮೆಲ್ಕಾರ್ ಪಾರ್ಕ್‌ನ ಅಧ್ಯಕ್ಷರಾದ ಜಯಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…