ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ 23ರಿಂದ 29ರವರೆಗೆ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಈ ಸಂದರ್ಭ ಶ್ರೀ ಗುರುದತ್ತಾತ್ರೇಯರ ಅವತಾರ ವಿಶೇಷ ಸಮರಸ ತತ್ತ್ವವನ್ನು ಜಗತ್ತಿಗೆ ಸಾರಿ, ವಿಶ್ವ ಮಾನವ ಧರ್ಮದ ಅರಿವು ಮೂಡಿಸುವುದೇ ಆಗಿದೆ. ಇಂತಹ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಿದ್ಧರಿರುವ ಗುರುಭಜಕರಿಗೆ ’ಮಾಲಾಧಾರಣೆ’(ವೃತಾಚರಣೆ) ಮಾಡುವುದಕ್ಕೆ ಸಪ್ತಾಹ ಪರ್ಯಂತ ಅವಕಾಶವನ್ನು ಕಲ್ಪಿಸಲಾಗಿದೆ. ಡಿ.23ನೇ ಬುಧವಾರ ಬೆಳಗ್ಗೆ ದೀಪಾರಾಧನೆ, ಶ್ರೀಗಣಪತಿ ಹವನದೊಂದಿಗೆ ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ. ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ದತ್ತಮಾಲಾಧಾರಣೆ. ಮಧ್ಯಾಹ್ನ ಮಹಾಪೂಜೆ, ಸಂಜೆ ಘಂಟೆ ೭ ರಿಂದ ಶ್ರೀ ದತ್ತಾಂಜನೇಯ ದೇವರ ಪಲ್ಲಕಿ ಉತ್ಸವ, ರಂಗಪೂಜೆ, ಬೆಳ್ಳಿ ರಥೋತ್ಸವ ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ ಶ್ರೀ ಗುರುಚರಿತ್ರೆ ಪಾರಾಯಣ, ಮಧ್ಯಾಹ್ನ ಮಹಾಪೂಜೆ, ಮಹಾಸಂತರ್ಪಣೆ ಹಾಗೂ ರಾತ್ರಿ ರಂಗಪೂಜೆ, ಬೆಳ್ಳಿ ರಥೋತ್ಸವ ಸೇವೆ ನಡೆಯುವುವು.
ಡಿ.29ರಂದು ಬೆಳಿಗ್ಗೆ ಸ್ವಯಂಭೂ ನಾಗಸನ್ನಿಧಿಯಲ್ಲಿ ನಾಗತಂಬಿಲ, ಬಳಿಕ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ. ಮಧ್ಯಾಹ್ನ ಶ್ರೀ ದತ್ತ ಮಹಾಯಾಗ ಸಪ್ತಾಹದ ಪೂರ್ಣಾಹುತಿ, ಮಹಾಪೂಜೆ, ಮಹಾಸಂತರ್ಪಣೆ. ರಾತ್ರಿ ರಂಗಪೂಜೆ, ಮಹಾಪೂಜೆ, ಬೆಳ್ಳಿ ರಥೋತ್ಸವ ಸೇವೆ ಹಾಗೂ ಉಯ್ಯಾಲೆ ಸೇವೆಗಳು ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳನ್ನು ಸರಕಾರದ ಕೋವಿಡ್ 19ರ ನಿಯಮಗಳನ್ನು ಪಾಲಿಸಲಾಗುವುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.