ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಪಂಗಳ ಚುನಾವಣೆ ಮಂಗಳವಾರ 7 ಗಂಟೆಗೆ ಆರಂಭಗೊಂಡು ಸಂಜೆ 5 ಗಂಟೆಗೆ ಮುಕ್ತಾಯಗೊಂಡಿದೆ. ಮಧ್ಯಾಹ್ನ 3 ಗಂಟೆವರೆಗಿನ ಮತ ಚಲಾವಣೆಯ ಲೆಕ್ಕಾಚಾರಗಳನ್ವಯ ಒಟ್ಟು 64.5 ಶೇಕಡಾ ಮತ ಚಲಾವಣೆಯಾಗಿದೆ. 87571 ಮಂದಿ ಪುರುಷರು, 91178 ಮಹಿಳೆಯರು ಹಾಗೂ 3 ಇತರರು ಮತ ಚಲಾವಣೆ ಮಾಡಿದ್ದಾರೆ. ಒಟ್ಟು 1,78,752 ಮಂದಿ ಮಧ್ಯಾಹ್ನ 3 ಗಂಟೆಯೊಳಗೆ ತಮ್ಮ ಹಕ್ಕು ಚಲಾವಣೆ ಮಾಡಿದ್ದು ವಿಶೇಷ. ಮಹಿಳೆಯರು, ವೃದ್ಧರು, ಮೊದಲ ಬಾರಿ ಮತ ಚಲಾವಣೆ ಮಾಡುವ ಉತ್ಸಾಹಿಗಳು ಬಿಸಿಲನ್ನೂ ಲೆಕ್ಕಿಸದೆ ಮತದಾನ ಮಾಡಿದರೆ, ಬೂತ್ ನ ಹೊರಗೆ ನಿಗದಿಪಡಿಸಿದ ಜಾಗಗಳಲ್ಲಿ ಅಭ್ಯರ್ಥಿಗಳು ನಿಂತುಕೊಂಡದ್ದು ಕಂಡುಬಂತು. ಮತಗಟ್ಟೆಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರ ಜೊತೆಗೆ ಸ್ಯಾನಿಟೈಸರ್ ಒದಗಿಸುವ ಹಾಗೂ ಥರ್ಮಲ್ ಸ್ಕ್ಯಾನರ್ ಮೂಲಕ ತಾಪಮಾನ ಪರೀಕ್ಷೆ ಮಾಡುತ್ತಿದ್ದರೆ, ಮಾಸ್ಕ್ ಹಾಕಿ ಮತಗಟ್ಟೆಗೆ ಆಗಮಿಸಲು ಪ್ರೇರೇಪಣೆ ನೀಡಿದರು.