ಬಂಟ್ವಾಳ: ಭಂಡಾರಿ ಸಮಾಜ ಸಂಘ ಮತ್ತು ಭಂಡಾರಿ ಯುವ ವೇದಿಕೆ ಹಾಗೂ ಭಂಡಾರಿ ಮಹಿಳಾ ಘಟಕ ಬಂಟ್ವಾಳ ನೇತೃತ್ವದಲ್ಲಿ ಬಂಟ್ವಾಳ ಭಂಡಾರಿ ಸಭಾಭವನದ ವಾರ್ಷಿಕ ಸಂಭ್ರಮಾಚರಣೆ ಮತ್ತು ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಗೋಪಾಲ ಭಂಡಾರಿ ಕಕ್ಕೆಪದವು ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯ ಪೊಲೀಸ್ ಇಲಾಖೆಗೆ ಸಬ್ ಇನ್ಸ್ ಪೆಕ್ಟರ್ ಆಗಿ ಮಹಿಳಾ ವಿಭಾಗದಿಂದ ರಾಜ್ಯಮಟ್ಟದಲ್ಲಿ ಎರಡನೇ ಸ್ಥಾನ ಪಡೆದು ಆಯ್ಕೆಗೊಂಡನಿಧಿ ಬಿ.ಎನ್, ವಿಜಯ ಬ್ಯಾಂಕಿನ ನಿವೃತ್ತ ಸೀನಿಯರ್ ಮೆನೇಜರ್ ದಿವಾಕರ ಶಂಭೂರು ದಂಪತಿಗಳನ್ನು ಸನ್ಮಾನಿಸಲಾಯಿತು. ಬಂಟ್ವಾಳ ಎಸ್. ವಿ.ಎಸ್ .ಕಾಲೇಜಿನ ನಿವೃತ್ತ ಉಪನ್ಯಾಸಕ ಪೊ, ನಾರಾಯಣ ಭಂಡಾರಿ, ಬಂಟ್ವಾಳ ಬಿಎಸ್ಸೆನ್ನೆಲ್ ನಿವೃತ್ತ ಕಚೇರಿ ಅಧೀಕ್ಷಕಿ ಯಶೋದಾ ನಾರಾಯಣ ಭಂಡಾರಿ, ಮೆಸ್ಕಾಂನ ನಿವೃತ್ತ ಪವರ್ ಮ್ಯಾನ್ ಭಾಸ್ಕರ ಭಂಢಾರಿ ನೇರಳಕಟ್ಟೆ, ಕೆಎಸ್ ಆರ್ ಟಿಸಿಯ ನಿವೃತ್ತ ಸಹಾಯಕ ಸಂಚಾರಿ ನಿಯಂತ್ರಕ ಜಯರಾಮ ಭಂಡಾರಿ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯ ನಿವೃತ್ತ ಅಧೀಕ್ಷಕ ದೇವರಾಜ್ ಭಂಡಾರಿ, ನಿವೃತ್ತ ಸೈನಿಕ ನಾಗೇಶ್ ಭಂಡಾರಿ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಭಂಡಾರಿ ಸಮಾಜ ಸಂಘದ ಗೌರವ ಅಧ್ಯಕ್ಷ ದಿವಾಕರ ಶಂಭೂರು ಮತ್ತು ಕಾರ್ಯದರ್ಶಿ ಜಯರಾಮ ಭಂಡಾರಿ, ಯುವ ವೇದಿಕೆಯ ಅಧ್ಯಕ್ಷ ರಮೇಶ್ ಭಂಡಾರಿ ಮೈರಾನ್ ಪಾದೆ, ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಸುರೇಶ್ ಉಪಸ್ಥಿತರಿದ್ದರು.ನಾರಾಯಣ ಭಂಡಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಜಯರಾಮ ಭಂಡಾರಿ ಮಂಡಿಸಿದರು, ವಾರ್ಷಿಕ ಲೆಕ್ಕಪತ್ರವನ್ನು ಚಂದ್ರಶೇಖರ ಭಂಡಾರಿ ಮಂಡಾಡಿ ಮಂಡಿಸಿದರು , ದಿವ್ಯ ಲತಾ ಭಾಸ್ಕರ ಭಂಡಾರಿ ಕಾರ್ಯಕ್ರಮ ನಿರೂಪಿಸಿ. ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು ಧನ್ಯವಾದವಿತ್ತರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…