ಬಂಟ್ವಾಳ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಡಿ.22ರಂದು 57 ಗ್ರಾಪಂಗಳಲ್ಲಿ ನಡೆಯಲಿದ್ದು, ನಾಮಪತ್ರ ಹಿಂತೆಗೆಯುವ ದಿನವಾದ ಸೋಮವಾರ 550 ಮಂದಿ ಉಮೇದುವಾರಿಕೆಯನ್ನು ಹಿಂಪಡೆದರು. ಇದರೊಂದಿಗೆ 10 ಗ್ರಾಪಂಗಳ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಒಟ್ಟು 1925 ಮಂದಿ 822 ಸ್ಥಾನಗಳಿಗೆ ಸ್ಪರ್ಧಿಸಲಿದ್ದಾರೆ.
ತಾಲೂಕಿನ ಇಡ್ಕಿದುವಿನಲ್ಲಿ 4 ಮಂದಿ ಅವಿರೋಧವಾಗಿ ಆಯ್ಕೆಗೊಂಡರೆ, ಪುಣಚ ಮತ್ತು ವಿಟ್ಲಪಡ್ನೂರಿನಲ್ಲಿ ತಲಾ 2 ಮಂದಿ ಅವಿರೋಧವಾಗಿ ಆಯ್ಕೆಗೊಂಡರು. ಅಮ್ಟಾಡಿ, ಕರಿಯಂಗಳ, ಅಮ್ಮುಂಜೆ, ಮೇರಮಜಲು, ತುಂಬೆ, ಬಾಳ್ತಿಲ, ಫಜೀರು ಗ್ರಾಪಂಗಳಲ್ಲಿ ತಲಾ 1 ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸಂಗಬೆಟ್ಟುವಿನ 15 ಸ್ಥಾನಗಳಿಗೆ 30, ಕುಕ್ಕಿಪ್ಪಾಡಿಯ 12 ಸ್ಥಾನಗಳಿಗೆ 24, ಚೆನ್ನೈತೋಡಿಯ 20ಸ್ಥಾನಗಳಿಗೆ 41, ಪಿಲಾತಬೆಟ್ಟಿನ 9 ಸ್ಥಾನಗಳಿಗೆ 18, ಇರ್ವತ್ತೂರಿನ 11 ಸ್ಥಾನಗಳಿಗೆ 26, ಕಾವಳಪಡೂರಿನ 18 ಸ್ಥಾನಗಳಿಗೆ 41, ಕಾವಳಮುಡೂರಿನ 12 ಸ್ಥಾನಗಳಿಗೆ 30, ಉಳಿಯ 11 ಸ್ಥಾನಗಳಿಗೆ 22, ಬಡಗಕಜೆಕಾರಿನ 12 ಸ್ಥಾನಗಳಿಗೆ 29, ಸರಪಾಡಿಯ 11 ಸ್ಥಾನಗಳಿಗೆ 23, ಮಣಿನಾಲ್ಕೂರಿನ 13 ಸ್ಥಾನಗಳಿಗೆ 27, ನಾವೂರಿನ 17 ಸ್ಥಾನಗಳಿಗೆ 41, ಪಂಜಿಕಲ್ಲಿನ 16 ಸ್ಥಾನಗಳಿಗೆ 32, ಅಮ್ಟಾಡಿಯ 19 ಸ್ಥಾನಗಳಿಗೆ 39 (ಇಲ್ಲಿ 1 ಅವಿರೋಧ ಆಯ್ಕೆ), ರಾಯಿಯ 11 ಸ್ಥಾನಗಳಿಗೆ 22, ಅರಳದ 10 ಸ್ಥಾನಗಳಿಗೆ 22, ಬಡಗಬೆಳ್ಳೂರಿನ 13 ಸ್ಥಾನಗಳಿಗೆ 29, ಕರಿಯಂಗಳದ 11 ಸ್ಥಾನಗಳಿಗೆ 25, ಅಮ್ಮುಂಜೆಯ 12 ಸ್ಥಾನಗಳಿಗೆ 34, ಮೇರಮಜಲಿನ 11 ಸ್ಥಾನಗಳಿಗೆ 22 (ಇಲ್ಲಿ 1 ಅವಿರೋಧ ಆಯ್ಕೆಯಾಗಿದೆ) ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತುಂಬೆ 15 ಸ್ಥಾನಗಳಿಗೆ 41 (1 ಅವಿರೋಧ ಆಯ್ಕೆ), ಕಳ್ಳಿಗೆ 11 ಸ್ಥಾನಗಳಿಗೆ 22, ನರಿಕೊಂಬು 26 ಸ್ಥಾನಗಳಿಗೆ 63, ಬಾಳ್ತಿಲ 15 ಸ್ಥಾನಗಳಿಗೆ 35 (1 ಅವಿರೋಧ ಆಯ್ಕೆ), ಕಡೇಶಿವಾಲಯ 13 ಸ್ಥಾನಗಳಿಗೆ 27, ಬರಿಮಾರು 8 ಸ್ಥಾನಗಳಿಗೆ 18, ಗೋಳ್ತಮಜಲು 24 ಸ್ಥಾನಗಳಿಗೆ 60, ಸಜಿಪಮುನ್ನೂರು 23 ಸ್ಥಾನಗಳಿಗೆ 67, ಸಜಿಪಮೂಡ 20 ಸ್ಥಾನಗಳಿಗೆ 52, ಸಜಿಪನಡು 15 ಸ್ಥಾನಗಳಿಗೆ 44, ಕುರ್ನಾಡು 7 ಸ್ಥಾನಗಳಿಗೆ 14, ಸಜಿಪಪಡು8 ಸ್ಥಾನಗಳಿಗೆ 19, ಫಜೀರು 16 ಸ್ಥಾನಗಳಿಗೆ 38 (1 ಅವಿರೋಧ ಆಯ್ಕೆ), ಬಾಳೆಪುಣಿ 29 ಸ್ಥಾನಗಳಿಗೆ 72, ನರಿಂಗಾನ 17 ಸ್ಥಾನಗಳಿಗೆ 39, ಮಂಚಿ 21 ಸ್ಥಾನಗಳಿಗೆ 54, ಇರಾ 19 ಸ್ಥಾನಗಳಿಗೆ 48, ವೀರಕಂಭ 14 ಸ್ಥಾನಗಳಿಗೆ 29, ಬೋಳಂತೂರು 11 ಸ್ಥಾನಗಳಿಗೆ 27, ಮಾಣಿ 10 ಸ್ಥಾನಗಳಿಗೆ 20, ಪೆರಾಜೆ 8 ಸ್ಥಾನಗಳಿಗೆ 17, ನೆಟ್ಲಮುಡ್ನೂರು 11 ಸ್ಥಾನಗಳಿಗೆ 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅನಂತಾಡಿ 7 ಸ್ಥಾನಗಳಿಗೆ 20, ಕೆದಿಲದ 14 ಸ್ಥಾನಗಳಿಗೆ 37, ಪೆರ್ನೆಯ 15 ಸ್ಥಾನಗಳಿಗೆ 32, ಇಡ್ಕಿದುವಿನ 15 ಸ್ಥಾನಗಳಿಗೆ 42 (4 ಅವಿರೋಧ ಆಯ್ಕೆ), ವಿಟ್ಲಮುಡ್ನೂರುವಿನ 12 ಸ್ಥಾನಗಳಿಗೆ 28, ವಿಟ್ಲಪಡ್ನೂರು 15 ಸ್ಥಾನಗಳಿಗೆ 33 (2 ಸ್ಥಾನಗಳು ಅವಿರೋಧ ಆಯ್ಕೆ) , ಕೊಳ್ನಾಡು 31 ಸ್ಥಾನಗಳಿಗೆ 75, ಸಾಲೆತ್ತೂರು 7 ಸ್ಥಾನಗಳಿಗೆ 15, ಕರೋಪಾಡಿ 16 ಸ್ಥಾನಗಳಿಗೆ 35, ಕನ್ಯಾನ 20 ಸ್ಥಾನಗಳಿಗೆ 55, ಪೆರುವಾಯಿ 8 ಸ್ಥಾನಗಳಿಗೆ 20, ಮಾಣಿಲ 8 ಸ್ಥಾನಗಳಿಗೆ 16, ಅಳಿಕೆ 15 ಸ್ಥಾನಗಳಿಗೆ 30, ಕೇಪು 16 ಸ್ಥಾನಗಳಿಗೆ 36, ಪುಣಚ 18 ಸ್ಥಾನಗಳಿಗೆ 44 (2 ಅವಿರೋಧ) ಮಂದಿ ಕಣದಲ್ಲಿದ್ದಾರೆ.