ಬಂಟ್ವಾಳ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ (ರಿ ) ಬೆಂಗಳೂರು, ಇದರ ಬಂಟ್ವಾಳ ತಾಲೂಕು ಶಾಖೆಯ 2020-25 ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆದು 15 ಸ್ಥಾನಕ್ಕೆ 15 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ವರ್ಗದಲ್ಲಿ ನಾರಾಯಣ ಪೂಜಾರಿ ಎಸ್. ಕೆ, ದೇವರಾಜ್ ಎಸ್. ಕೆ, ಪುಟ್ಟರಂಗನಾಥ ಟಿ, ರವಿಕುಮಾರ್, ನವೀನ್ ಪಿ. ಎಸ್, ಯತೀಶ್.ಪಿ, ಸುನಿಲ್ ಸಿಕ್ವೆರ, ಜಯರಾಮ್, ಶಿವಪ್ರಸಾದ್, ವಸಂತ್ ರೈ. ಬಿ ಕೆ. ಮಹಿಳಾ ಮೀಸಲಾತಿ ಸ್ಥಾನದಲ್ಲಿ ಭಾರತಿ, ಪ್ರಮೀಳಾ, ಡೆಪ್ನಿ ನೋಯೆಲ್ಲಾ ಡೇಸ, ಹೇಮಾವತಿ, ಮಮತಾ ಪಿ, ಶಶಿ ಬಿ ಆಯ್ಕೆಯಾದರು. ವಿಜೇತರಿಗೆ ತಾಲೂಕು ಚುನಾವಣಾಧಿಕಾರಿ ಟಿ ಶೇಷಪ್ಪ ಮಾಸ್ಟರ್ ಪ್ರಮಾಣ ಪತ್ರ ನೀಡಿ ಸುಸೂತ್ರವಾಗಿ ಚುನಾವಣಾ ಪ್ರಕ್ರಿಯೆ ನಡೆಯಲು ಸಹಕರಿಸಿದ ಎಲ್ಲಾ ಶಿಕ್ಷರಿಗೂ ಅಭಿನಂದಿಸಿದರು. ಸಹಾಯಕ ಚುನಾವಣಾಧಿಕಾರಿ ಬಾಬು ಮಾಸ್ಟರ್ ಸಹಕರಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…