ಗ್ರಾಪಂ ಚುನಾವಣೆ ಡಿ.22ರಂದು ನಡೆಯಲಿದ್ದು, ಎಲ್ಲ 57 ಗ್ರಾಪಂಗಳಲ್ಲೀಗ ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನವಾದ ಸೋಮವಾರದ ಬಳಿಕ ಕಣದಲ್ಲಿರುವವರ ಸ್ಪಷ್ಟ ಚಿತ್ರಣ ದೊರಕಿದೆ. ಅಂತಿಮವಾಗಿ ಸ್ಪರ್ಧೆಯಲ್ಲಿ 1925 ಮಂದಿ ಉಳಿದಿದ್ದಾರೆ. ಸೋಮವಾರ 550 ಮಂದಿ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಒಟ್ಟು 15 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಹೀಗಾಗಿ 57 ಗ್ರಾಪಂಗಳ 837ರಲ್ಲಿ 822 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ತಾಲೂಕಿನ ಇಡ್ಕಿದುವಿನಲ್ಲಿ 4 ಮಂದಿ ಅವಿರೋಧವಾಗಿ ಆಯ್ಕೆಗೊಂಡರೆ, ಪುಣಚ ಮತ್ತು ವಿಟ್ಲಪಡ್ನೂರಿನಲ್ಲಿ ತಲಾ 2 ಮಂದಿ ಅವಿರೋಧವಾಗಿ ಆಯ್ಕೆಗೊಂಡರು. ಅಮ್ಟಾಡಿ, ಕರಿಯಂಗಳ, ಅಮ್ಮುಂಜೆ, ಮೇರಮಜಲು, ತುಂಬೆ, ಬಾಳ್ತಿಲ, ಫಜೀರು ಗ್ರಾಪಂಗಳಲ್ಲಿ ತಲಾ 1 ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸೋಮವಾರ ಕನ್ಯಾನ ಗ್ರಾಪಂನಲ್ಲಿ 40 ಮಂದಿ ಉಮೇದುವಾರಿಕೆಯನ್ನು ಹಿಂಪಡೆದಿದ್ದರು. ಇದೀಗ ಚಿಹ್ನೆಗಳನ್ನೂ ಅಭ್ಯರ್ಥಿಗಳಿಗೆ ಕೊಡಲಾಗಿದೆ. ಪ್ರತಿಯೊಂದು ಗ್ರಾಪಂಗಳಲ್ಲೂ ಪ್ರಚಾರ ಆರಂಭಗೊಂಡಿದೆ.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…