ಬಂಟ್ವಾಳ: ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಓಂಕಾರ ಶ್ರೀ ಅಖಿಲೇಶ್ವರ ಭಜನಾ ಮಂಡಳಿ ವತಿಯಿಂದ ಪಂಚಮ ವರ್ಷದ 72 ಗಂಟೆಗಳ ಅಹೋರಾತ್ರಿ ಏಕಾಹಾ ಭಜನಾ ಮಹೋತ್ಸವದ ಸಮಾವೇಶಕ್ಕೆ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ, ಆರ್ ಎಸ್ ಎಸ್ ಪ್ರಮಖ ಡಾ. ಪ್ರಭಾಕರ ಭಟ್ ಕಲ್ಲಡ್ಕ ಸಹಿತ ಗಣ್ಯರು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಇವರಿಬ್ಬರನ್ನು ಪೂರ್ಣಕುಂಭದೊದಿಗೆ ಸ್ವಾಗತಿಸಲಾಯಿತು. ಶನಿವಾರ ಬೆಳಿಗ್ಗೆ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಹಾಗೂ ಕೊಡಿಮಜಲು ಅನಂತ ಪದ್ಮನಾಭ ಉಪಾದ್ಯಾಯ ದೀಪಪ್ರಜ್ವಲನೆಗೊಳಿಸಿ ಭಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಕೆ. ರಾಮ್ ಭಟ್ ಪೊಳಲಿ,ಬೆಂಜನಪದವು ರಮೇಶ್ ದೇವಿ ಪಾತ್ರಿ, ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ,ಬಂಟ್ವಾಳ ಘಟಕದ ಯೋಜನಾಧಿಕಾರಿ ಜಯಾನಂದ ಪಿ.,ಮೇಲ್ವಿಚಾರಕಿ ಮಮತ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ಕಾರ್ಯದರ್ಶಿ ಜಯರಾಮ್ ನೆಲ್ಲಿತ್ತಾಯ, ರಘುನಾಥ ಉಳ್ಳಾಲ, ವೆಂಕಟೇಶ್ ನಾವಡ ಪೊಳಲಿ ಸಮಾವೇಶದಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ ಅವರನ್ನು ಗೌರವಿಸಲಾಯಿತು. ಭಜನಾ ಮಂಡಳಿಯ ಅಧ್ಯಕ್ಷ ಯಶೋಧರ ಅಡ್ಡೂರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.