ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಅರಮನೆಹಿತ್ಲು ಎಂಬಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಒಂದು ಶನಿವಾರ ರಾತ್ರಿ ಬಳಿಕ ಕಂಡುಬಂದಿದೆ. ನಂದಾವರದಿಂದ ಅರಮನೆಹಿತ್ಲುವರೆಗೆ ಸಂಪರ್ಕ ರಸ್ತೆ ಕಾಮಗಾರಿಗೆ ಅನುದಾನ ದೊರೆತರೂ ಕೆಲಸ ನಡೆಯದ ಕಾರಣ ಬಹಿಷ್ಕರಿಸುತ್ತೇವೆ ಎಂದು ಬ್ಯಾನರ್ ನಲ್ಲಿ ನಮೂದಿಸಲಾಗಿದೆ.ಇಲ್ಲಿ ಸುಮಾರು 80ರಷ್ಟು ಮತದಾರರಿದ್ದಾರೆ.