ಬಂಟ್ವಾಳ: ಶ್ರೀದೇವಿ ಬಯಲಾಟ ಸಮಿತಿ ಮೆಲ್ಕಾರ್ ಇದರ 21ನೇ ವರ್ಷದ ಯಕ್ಷಗಾನ ಬಯಲಾಟವಾಗಿ ಭಾನುವಾರ 13ರಂದು ರಾತ್ರಿ ನಡೆಯಲಿದೆ
ರಾತ್ರಿ 9.30ಕ್ಕೆ ಮೆಲ್ಕಾರ್ ಶ್ರೀ ದೇವಿ ಮೈದಾನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ದ್ರೌಪದಿ ಪ್ರತಾಪ ಎಂಬ ಪುಣ್ಯ ಕಥಾಭಾಗವನ್ನು ಬಯಲಾಟವಾಗಿ ಆಡಿತೋರಿಸಲಿರುವರು. ಕಾರ್ಯಕ್ರಮದಲ್ಲಿ ಮೆಲ್ಕಾರ್ ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಮಧ್ಯಾಹ್ನ ಗಂಟೆ 12 ಕ್ಕೆ ಶ್ರೀದೇವಿಯ ಮಹಾಪೂಜೆ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿರುವುದು. ಸಂಜೆ ಗಂಟೆ 6ಕ್ಕೆ ಭಜನಾ ಮಂದಿರದಿಂದ ಗೊಂಬೆ ಕುಣಿತದೊಂದಿಗೆ ಶ್ರೀ ದೇವಿಯು ಭವ್ಯ ಮೆರವಣಿಗೆ ಹೊರಡಲಿರುವುದು. ಆಸಕ್ತರು ಭಾಗವಹಿಸಿ ಕೋವಿಡ್ ನಿಯಮ ಪಾಲಿಸಬೇಕಾಗಿ ಬಯಲಾಟ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…