ಬಂಟ್ವಾಳ : ಕರ್ನಾಟಕ ರಾಜ್ಯ ಕುಂಬಾರ/ಕುಲಾಲರ ಯುವವೇದಿಕೆಗಳ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಮಂಗಳೂರು ಇದರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪದಪ್ರಧಾನ ಸಮಾರಂಭದ ಪ್ರಯುಕ್ತ ಸ್ವಜಾತಿ ಬಾಂಧವರಿಗೆ ಸ್ನೇಹ ಮಿಲನ ತಾಲೂಕು ಮಟ್ಟದ ಸ್ಪರ್ಧಾಕೂಟ ಡಿಸೆಂಬರ್ ೨೭ರಂದು ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿದೆ.
ಈ ಸಂದರ್ಭ ಮಕ್ಕಳಿಗಾಗಿ ಛದ್ಮವೇಷ, ಚಿತ್ರಕಲೆಯಲ್ಲಿ ೧ರಿಂದ ೪ನೇ ತರಗತಿ ಒಳಗಿನ ಮಕ್ಕಳಿಗೆ ನಮ್ಮ ಪರಿಸರ, ೫ರಿಂದ ೮ನೇ ತರಗತಿ ಮಕ್ಕಳಿಗೆ ಕರಾವಳಿ ಅಲೆಗಳು, ೯ರಿಂದ ೧೨ನೇ ತರಗತಿ ಮಕ್ಕಳಿಗೆ ಕುಂಬಾರ ಮಡಿಕೆ ಮಾಡುವುದು, ಪೇಪರ್ ಕ್ರಾಫ್ಟ್, ಮಹಿಳೆಯರಿಗಾಗಿ ತೆಂಗಿನಗರಿ ಹೆಣೆಯುವುದು, ಹೂ ಕಟ್ಟುವ ಸ್ಪರ್ಧೆ, ಮೆಹಂದಿ ಸ್ಪರ್ಧೆ, ಪುರುಷರಿಗಾಗಿ ಕ್ಯಾರಂ ಬೋರ್ಡ್ ಸ್ಪರ್ಧೆ, ೫ ವರ್ಷದ ಒಳಗಿನ ಮಕ್ಕಳಿಗೆ ಭಕ್ತ ಕುಂಬಾರ ಛದ್ಮವೇಷ ಸ್ಪರ್ಧೆ, ಮುಕ್ತ ವಿಭಾಗದಲ್ಲಿ ಡ್ಯಾನ್ಸ್ ಧಮಕಾ – ಡ್ಯಾನ್ಸ್ ಸ್ಪರ್ಧೆ, ತುಳುನಾಡ ಪಾಡ್ದನ ಸ್ಪರ್ಧೆ, ಕಸದಿಂದ ರಸ, ಕ್ಲೇ ಮಾಡೆಲಿಂಗ್ ಸ್ಪರ್ಧೆ ನಡೆಯಲಿರುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಧ್ಯಕ್ಷ ಸತೀಶ್ ಕುಲಾಲ್ ಜಕ್ರಿಬೆಟ್ಟು, ಕಾರ್ಯದರ್ಶಿ ಪುರುಷೋತ್ತಮ ಎಸ್. ಮೈರಾನ್‌ಪಾದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.