ಬಂಟ್ವಾಳ: ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುಲಾಲ ಯಾನೆ ಕುಂಬಾರ ಸಮುದಾಯದ ಏಳಿಗೆಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕರಾವಳಿ ಕುಲಾಲ, ಕುಂಬಾರ ವೇದಿಕೆಗಳ ಒಕ್ಕೂಟ ಮಂಗಳೂರು ಇದರ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಹಾಗೂ ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಬಂಟ್ವಾಳ ಇದರ ವತಿಯಿಂದ ಬಂಟ್ವಾಳ ತಹಶೀಲ್ದಾರ್ ಮೂಲಕ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕುಲಾಲ, ಕುಂಬಾರರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಹಲವು ಬಾರಿ ಒತ್ತಾಯಿಸಲಾಗಿತ್ತಾದರೂ ಈವರೆಗೆ ನಿಗಮ ಸ್ಥಾಪನೆಯಾಗಿಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುಂಬಾರರಿಗೆ ನಿಗಮವನ್ನು ಸ್ಥಾಪಿಸಿ ಗರಿಷ್ಠ ಅನುದಾನ ನೀಡಿ ಕುಲಾಲ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ಕುಲಾಲ ಹಿರಿಯ ನಾಗರೀಕರ ಶ್ರೇಯೋಭಿವೃದ್ದಿ ಸಂಘದ ಅಧ್ಯಕ್ಷ ಸುಂದರ್ ಬಿ., ಕಾರ್ಯದರ್ಶಿ ಟಿ. ಸೇಸಪ್ಪ ಮೂಲ್ಯ, ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆಯ ಅಧ್ಯಕ್ಷ ಸತೀಶ್ ಕುಲಾಲ್ ಜಕ್ರಿಬೆಟ್ಟು, ಕಾರ್ಯದರ್ಶಿ ಪುನೀತ್ ಪ್ರಮುಖರಾದ ಸೋಮಪ್ಪ ಮೂಲ್ಯ, ಶೀನ ಮೂಲ್ಯ, ಓಬಯ ಮೂಲ್ಯ, ಕೃಷ್ಣಪ್ಪ ಬಂಟ್ವಾಳ, ಕೃಷ್ಣ ಶ್ಯಾಂ, ವಿಠಲ ಜಕ್ರಿಬೆಟ್ಟು, ಸೋಮಯ್ಯ ಅನಿಲನಡೆ, ಸುಕುಮಾರ್ ಬಂಟ್ವಾಳ್, ಲಕ್ಷ್ಮಣ್ ಕುಲಾಲ್ ಅಗ್ರಬೈಲು, ಗಣೇಶ್ ಕುಲಾಲ್ ಕಾಮಾಜೆ, ಎಚ್ಕೆ ನಯನಾಡು, ನಾರಾಯಣ ಸಿ. ಪೆರ್ನೆ, ಸೋಮನಾಥ ಸಾಲ್ಯಾನ್, ಕಾರ್ತಿಕ್ ಮಯ್ಯರ ಬೈಲು, ಉಮೇಶ್ ಮೂಲ್ಯ, ಅಶೋಕ್ ಕಿಲ್ತೋಡಿ, ವಿತೇಶ್, ಎನ್ನಾರ್ಕೆ ವಿಶ್ವನಾಥ, ಜಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…