ಬಂಟ್ವಾಳ

ಕರಾವಳಿ ಕಲೋತ್ಸವ ಕುರಿತ ಚಿಂತನ ಮಂಥನ ಸಭೆ

ಬಂಟ್ವಾಳ : ಕರಾವಳಿ ಕಲೋತ್ಸವ 2021 ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ವರ್ಷದ ಕಲಾ ಯೋಜನೆಯ ಬಗ್ಗೆ ಈ ವರ್ಷ ಹಮ್ಮಿಕೊಂಡ ನವ ಯೋಚನೆಯ ನವ ಚಿಂತನೆಯ ಕೃಷಿ ಮೇಳದ ಬಗ್ಗೆ ಚಿಂತನ ಮಂಥನ ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇಗುಲದ ಸಭಾಂಗಣದಲ್ಲಿ ನಡೆಯಿತು.

ಫೆಬ್ರವರಿ 11ರಿಂದ  25 ರತನಕ  ಕೃಷಿ ಮೇಳ, ತುಳು ನಾಟಕ ಸ್ಪರ್ಧೆ, ಚೆಂಡೆ, ಧಪ್ , ಡ್ಯಾನ್ಸ್ ಸ್ಪರ್ಧೆ, ಅಮ್ಯೂಸ್ಮೆಂಟ್, ಇತರ ಸ್ಟಾಲ್ ಗಳ ವರ್ಣಾತಿತ ಕಾರ್ಯಕ್ರಮಗಳು ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.

ಮೊದಲ ಮೂರು ದಿನ ಆಕರ್ಷಕ, ಕ್ರಷಿ ಅನಭವದಲ್ಲಿ ಯವಕರಿಗೆ, ಮಹಿಳೆಯರಿಗೆ, ಜನತೆಗೆ ಕ್ರಷಿ ಮಾಹಿತಿ ನೀಡುವ ವಿಚಾರ ಗೋಷ್ಠಿ, ಅನುಭವ, ಸ್ಪರ್ಧೆ, ಮೂಲಕ ವನಸಿರಿ, ಬನಸಿರಿ, ಕೃಷಿಸಿರಿ,  ತಾಂತ್ರಿಕ ಸಿರಿ  ಮೂಲಕ ಕೃಷಿ ವಿಚಾರ ತಿಳಿಸುವ ಬಗ್ಗೆ ಕಾರ್ಯಕ್ರಮಕ್ಕಾಗಿ ಸದಾನಂದ ಶೆಟ್ಟಿ ಸೊರ್ನಾಡು ಅವರನ್ನು ಪ್ರಧಾನ ಸಂಚಾಲಕರಾಗಿ ನೇಮಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷರಾಗಿ ಸುದರ್ಶನ್ ಜೈನ್, ಸಂಚಾಲಕರಾಗಿ ಮೊಹನದಾಸ್ ಕೊಟ್ಟಾರಿ ಮುನ್ನೂರು, ಗೌರವ ಸಲಹೆಗಾರರಾದ ಅಶೊಕ್ ಶೆಟ್ಟಿ ಸರಪಾಡಿ, ಜಯಾನಂದ ಪೆರಾಜೆ, ಶೇಷಪ್ಪ ಮಾಸ್ಟರ್, ದಿನೇಶ್ ಶೆಟ್ಟಿ ಪಂಜಿಕಲ್ಲು, ಎಚ್ಕೆ ನಯನಾಡು, ರತ್ನ ದೇವ್   ಪುಂಜಾಲಕಟ್ಟೆ, ಜೆನಿತ್ ಜೈನ್, ಮಹಮ್ಮದ್ ನಂದಾವರ, ಆಶ್ಲೇಷ್ ಪೋಲೀಸ್ ಲೈನ್ ಉಪಸ್ಥಿತರಿದ್ದರು. ಸಮಿತಿಯ ಸೌಮ್ಯ ಯಶವಂತ್ ಭಂಡಾರಿಬೆಟ್ಟು ಸ್ವಾಗತಿಸಿ ವಂದಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts