ಬಂಟ್ವಾಳ

ಗೀತಾಜಯಂತಿ ಆಚರಣೆ: ಭಗವದ್ಗೀತೆ ಆಧಾರಿತ ಪ್ರಬಂಧ ಸ್ಪರ್ಧೆ

ಬಂಟ್ವಾಳ: ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ (ರಿ). ಮಂಗಳೂರು ಇದರ ಬಂಟ್ವಾಳ ಘಟಕ ಆಶ್ರಯದಲ್ಲಿ ಡಿಸೆಂಬರ್  25 ರಂದು ನಢೆಯಲಿರುವ ಗೀತಾ ಜಯಂತಿ ಆಚರಣೆಯ ಅಂಗವಾಗಿ ವಿವಿಧ ಹಂತದ ವಿದ್ಯಾರ್ಥಿಗಳಿಗೆ

ಶ್ರೀಮದ್ಭಗವದ್ಗೀತೆ ಆಧಾರಿತ ಪ್ರಬಂಧ ಸ್ಪರ್ಧೆ ನಡೆಯಲಿದೆ.

ವಿಷಯಗಳು ಹೀಗಿವೆ. 1, ಪ್ರಾಥಮಿಕ ಹಂತದಲ್ಲಿ (5 ರಿಂದ 8 ನೇ ತರಗತಿಯ ಮಕ್ಕಳು) ಯಶೋದೆಯ ಮಡಿಲಲ್ಲಿ ಶ್ರೀ ಕೃಷ್ಣ, 2. ಪ್ರೌಢಶಾಲಾ ಹಂತ (9 ರಿಂದ  12  ತರಗತಿಯ ಮಕ್ಕಳಿಗೆ)ಶ್ರೀ ಕೃಷ್ಣನ ಬಾಲ ಲೀಲೆಗಳ ಸಂದೇಶ. 3. ಪದವಿ ಹಂತದ ವಿದ್ಯಾರ್ಥಿಗಳಿಗೆ ಸರ್ವ ಸ್ಪರ್ಶಿ ಭಗವದ್ಗೀತಾ  4. ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ ಗೀತಾಧ್ಯಯನ ಶೀಲಸ್ಯ ಪ್ರಾಣಾಯಾಮ ಪರಸ್ಯ ಚ ನೈವ ಸಂತಿ ಹಿ ಪಾಪಾನಿ ಪೂರ್ವಜನ್ಮ ಕೃತಾನಿ ಚ ಈ ಮೇಲಿನ ಶ್ಲೋಕವನ್ನು ಆಧರಿಸಿದ ವಿಶ್ಲೇಷಣಾತ್ಮಕ ಪ್ರಬಂಧ ಬರೆಯಲು ಅವಕಾಶವಿದೆ.

ಜಾಹೀರಾತು

ಪ್ರಬಂಧಗಳು ಎ4 ಅಳತೆಯ ಪೇಪರ್ ನಲ್ಲಿ 4 ಪುಟಗಳ ಮಿತಿಯಲ್ಲಿ ಇರಬೇಕು. ಪ್ರಬಂಧಗಳನ್ನು ಬರೆದು ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬೇಕಾದ ವಿಳಾಸ ಅಧ್ಯಕ್ಷರು, ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ (ರಿ), ಶ್ರೀ ಲಕ್ಷ್ಮೀ ನರಸಿಂಹ ಕ್ಲಿನಿಕ್. ಉಪೇಂದ್ರ ಸೌಧ. ಬಿ.ಸಿ.ರೋಡ್. ಬಂಟ್ವಾಳ ತಾಲೂಕು. ದ.ಕ. 574219, ಪ್ರಬಂಧಗಳನ್ನು ಎ4 ಅಳತೆಯ ಪೇಪರ್ ನಲ್ಲಿ ಬರೆದು ಸ್ಕ್ಯಾನ್ ಮಾಡಿ  ಇಲ್ಲವೇ ನೇರವಾಗಿ ಇ-ಮೈಲ್ ಮೂಲಕವೂ ಕಳುಹಿಸಬಹುದು ಕೊನೆಯ ದಿನಾಂಕ ಡಿಸೆಂಬರ್ 23 ಆಗಿರುತ್ತದೆ. E-Mail address:damodar.e1@gmail.com ಸ್ಪರ್ಧಾ ನಿರ್ಣಾಯಕರ ತೀರ್ಪು ಅಂತಿಮ ಆಗಿರುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಶಿವಪ್ರಸಾದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.