ಬಂಟ್ವಾಳ

ಸಿದ್ಧಕಟ್ಟೆ ಎಬಿವಿಪಿಯಿಂದ ಡಾ.ಅಂಬೇಡ್ಕರ್ ಸ್ಮರಣೆ

ಸಿದ್ಧಕಟ್ಟೆ: ಅಖಿಲ ಭಾರತೀಯ ವಿದ್ಯಾರ್ಥಿ  ಪರಿಷತ್ ಸಿದ್ದಕಟ್ಟೆ ನಗರದ ವತಿಯಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಅಂಗವಾಗಿ ಸಾಮಾಜಿಕ ಸಾಮರಸ್ಯ ದಿನವನ್ನಾಗಿ ಆಚರಿಸಲಾಯಿತು. ಸಿದ್ದಕಟ್ಟೆಯ ಅಶ್ವಿನಿ ವಾಣಿಜ್ಯ ಸಂಕೀರ್ಣದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೊಡಿ ಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬಡತನ ಹಾಗೂ ಇತರೆ ಅಡೆತಡೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು. ನಾವು ಅದನ್ನೆಲ್ಲ ಮೆಟ್ಟಿ ಹೇಗೆ ಸಾಧನೆಯ ಶಿಖರವನ್ನೇರಬೇಕು ಎಂಬುದನ್ನು ಡಾ ಬಿ ಆರ್ ಅಂಬೇಡ್ಕರ್ ರವರನ್ನು ನೋಡಿ ಕಲಿಯಬೇಕಾಗಿದೆ. ಬಾಲ್ಯದಲ್ಲಿ ಅತ್ಯಂತ ಶೋಷಣೆಗೊಳಗಾದ ವ್ಯಕ್ತಿ ಮುಂದೆ ಸ್ವಾತಂತ್ರ್ಯ ಭಾರತದ ಕಾನೂನು ಸಚಿವರಾದದ್ದು ನಮಗೆಲ್ಲಾ ಸ್ಪೂರ್ತಿದಾಯಕ ಎಂದರು. ಈ ಸಂದರ್ಭ ವಿದ್ಯಾರ್ಥಿ ಪರಿಷತ್ ನ ಮಂಗಳೂರು ಜಿಲ್ಲಾ ಸಂಚಾಲಕರಾದ ಹರ್ಷಿತ್ ಕೊಯಿಲ, ತಾಲೂಕು ಸಂಚಾಲಕರಾದ ದಿನೇಶ್ ಕೊಯಿಲ, ನಗರ ಕಾರ್ಯದರ್ಶಿ ಗುರುಪ್ರಸಾದ್,ನಗರ ಸಹಕಾರ್ಯದರ್ಶಿ ಶಿವಕುಮಾರ್, ಕಾರ್ಯಕರ್ತರಾದ  ಕಿರಣ್,ಪ್ರಜ್ವಲ್, ನಿಶಾ, ಜಯಲಕ್ಷ್ಮಿ, ವಿಕ್ಷೀತಾ, ಅನುಶಾ, ಅಶ್ವಿತಾ, ಕೊಮಲಾಕ್ಷಿ, ಸುಕನ್ಯಾ, ಅಶ್ವಿನಿ, ಸೂರಜ್, ಉಜ್ವಲ್, ಸುಶಾಂತ್, ದೀಪಕ್, ಪ್ರದೀಪ್, ಅಪೂರ್ವ, ಹರ್ಷಿತಾ, ದೀಕ್ಷಿತ್, ಸುದರ್ಶನ್  ಉಪಸ್ಥಿತರಿದ್ದರು

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ