ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಮ ಪಂಚಾಯಿತಿಗಳ 837 ಸ್ಥಾನಗಳಿಗೆ ಡಿ.22ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಸೋಮವಾರ ಒಟ್ಟು 22 ನಾಮಪತ್ರಗಳು ಸಲ್ಲಿಕೆಯಾಗಿವೆ. ಇವರ ಪೈಕಿ 5 ಮಹಿಳೆ ಮೀಸಲಾತಿ, 17 ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದವರಲ್ಲಿ ಸೇರಿದ್ದಾರೆ. ಸೋಮವಾರ ಒಟ್ಟು 10 ಪಂಚಾಯಿತಿಗಳಲ್ಲಿ ನಾಮಪತ್ರ ಸಲ್ಲಿಕೆಯಾಗಿದ್ದರೆ, ಉಳಿದ 47 ಪಂಚಾಯಿತಿಗಳಲ್ಲಿ ಯಾರೂ ನಾಮಪತ್ರ ಸಲ್ಲಿಸಿಲ್ಲ. ಚೆನ್ನೈತೋಡಿ 4, ಇರ್ವತ್ತೂರು 1, ನಾವೂರು 3, ಅಮ್ಮುಂಜೆ 4, ಅಳಿಕೆ 1, ಕನ್ಯಾನ 1, ನೆಟ್ಲಮುಡ್ನೂರು 4, ನರಿಂಗಾನ 2, ಸಜಿಪಮುನ್ನೂರು 1, ಬಾಳ್ತಿಲ 1 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)