ಬಂಟ್ವಾಳ: ಬಂಟ್ವಾಳ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಪದಗ್ರಹಣ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, 100 ಶೇಕಡ ಫಲಿತಾಂಶ ಪಡೆದ ಶಾಲೆಗಳಿಗೆ ಸ್ಮರಣಿಕೆ, ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ಶಿಕ್ಷಕರನ್ನು ಅಭಿನಂದಿಸಲಾಯಿತು, ಈ ವರ್ಷ ಸೇವೆಯಿಂದ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರುಗಳಾದ ಫೆಲಿಕ್ಸ್ ಡಿಸೋಜ ಅಗ್ರಾರ್, ಜಗನ್ನಾಥ ಶೆಟ್ಟಿ ಕಕ್ಕೆಪದವು, ಚಂದ್ರಿಕ ನಾವೂರು, ಸುಮಂಗಲಿ ಸೂರ್ಯ, ಗಂಗಮ್ಮ ಪುಣಚ, ನಂದಿನಿ ಬಾಯಿ ಬಂಟ್ವಾಳ ಹಾಗೂ ಇ.ಸಿ.ಒ ಆಗಿದ್ದ ಸುಶೀಲ ಮಂಚಿ, ಸಂಘದ ಅಧ್ಯಕ್ಷರಾಗಿದ್ದ ರಮಾನಂದ ನೂಜಿಪ್ಪಾಡಿ ಸಿದ್ದಕಟ್ಟೆ ಮತ್ತು ಕಾರ್ಯದರ್ಶಿಯಾಗಿದ್ದ ಅನಿಲ್ ವಡಗೇರಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಮ್.ಪಿ ವಹಿಸಿದ್ದರು. ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕರ್ನಾಟಕ ಪ್ರೌಢ ಶಾಲೆ ಮಾಣಿ ಮುಖ್ಯ ಶಿಕ್ಷಕರಾದ ಬಿ.ಕೆ ಭಂಡಾರಿ, ಉಪಾಧ್ಯಕ್ಷ ರಾಧಾಕೃಷ್ಣ ಭಟ್ ಪೊಳಲಿ ಮತ್ತು ಸಿಸ್ಟರ್ ನವೀನ ಕಾರ್ಮೆಲ್ ಮೊಡಂಕಾಪು, ಕಾರ್ಯದರ್ಶಿ ಕಿರಣ್ ಕುಮಾರ್ ವಿಟ್ಲ, ಜತೆ ಕಾರ್ಯದರ್ಶಿ ಜಯರಾಮ ರೈ ಜೇಸಿಸ್ ವಿಟ್ಲ , ಕೋಶಾಧಿಕಾರಿ ರಮಾ ಭಂಡಾರಿ ಪಾಣೆಮಂಗಳೂರು ಮತ್ತು ನೂತನ ತಂಡದ ಸದಸ್ಯರನ್ನು ಅಭಿನಂದಿಸಿ ಶುಭ ಹಾರೈಸಿದರು.
ಸಮೂಹ ಸಂಪನ್ಮೂಲ ಅಧಿಕಾರಿ ರಾಘವೇಂದ್ರ ಬಲ್ಲಾಳ್, ಅಕ್ಷರ ದಾಸೋಹ ಸಂಯೋಜಕರಾದ ನೋಣಯ್ಯ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕರಾದ ರಮಾನಂದ ಸ್ವಾಗತಿಸಿದರು, ಕಿರಣ್ ಕುಮಾರ್ ವಂದಿಸಿದರು, ರಮಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.