ಬಂಟ್ವಾಳ

ಭಾರತೀಯ ಜನಕಲಾ ಸಮಿತಿ, ಯುವಜನ ಬಳಗ ಸಹಯೋಗದಲ್ಲಿ ಶ್ರಮದಾನ

ಬಂಟ್ವಾಳ: ಭಾರತೀಯ ಜನ ಕಲಾ ಸಮಿತಿ ಬಂಟ್ವಾಳ ಮತ್ತು ಯುವಜನ ಬಳಗದ ಸಹಯೋಗದಲ್ಲಿ ಬೆದ್ರಗುಡ್ಡೆಯಿಂದ, ನಲಿಕೆಮಾರು, ಮೊಡಂಕಾಪು ರಸ್ತೆ ತನಕ ಶ್ರಮಾದಾನ ನಡೆಸಲಾಯಿತು.

ಬಿ. ಸಿ ರೋಡಿನಿಂದ ಪೊಳಲಿಗೆ ಹೋಗುವ ವಿವೇಕಾನಂದ ರಸ್ತೆಯ ಇಕ್ಕೆಲಗಳಲ್ಲಿ ರಾಶಿಗಟ್ಟಲೆ ಪ್ಲಾಸ್ಟಿಕ್ ಬಾಟಲಿಗಳು ಇದ್ದು, ಹಳ್ಳಿಗಳಲ್ಲಿ  ಘನ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆ ಇರಲಿಲ್ಲ. ಜನವರಿ 12 ರಾಷ್ಟ್ರೀಯ ಯುವ ದಿನ. ಅವತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನದ ಹಿನ್ನೆಲೆಯಲ್ಲಿ ಅದರ ಪೂರ್ವ ಭಾವಿಯಾಗಿ ಈ ವಿವೇಕಾನಂದ ರಸ್ತೆಯ ಎರಡೂ ಕಡೆ ಬಿಸಾಕಿರುವ ಕಸ ಎತ್ತುವ ಸಂಕಲ್ಪವನ್ನು ತಂಡ ತೊಟ್ಟುಕೊಂಡಿತು.ಸಾಮಾಜಿಕ ಕಾರ್ಯಕರ್ತ ಜನಾರ್ಧನ ಕೆಸರಗದ್ದೆ ಯವರ ನಿರ್ದೇಶನದಂತೆ ಸ್ವಚ್ಛತಾ ಕೆಲಸವನ್ನು ಮಾಡಲಾಯಿತು. ಶ್ರೀನಿವಾಸ ಭಂಡಾರಿ, ಸುರೇಶ್ ಕುಮಾರ್, ಖಲೀಫ್, ಪ್ರಾಣೇಶ್, ಮದನ್, ಹರ್ಷಿತಾ, ಧನುಷ್, ನಿಶಾಂತ್, ನಿಷಿತಾ, ಮಮ್ತಾಜ್, ಶ್ವೇತಾ,  ವಿಜಯ ಕುಮಾರ್ ಮತ್ತು ಬಳಗ ಸಹಕರಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts