ಬಂಟ್ವಾಳ

ಗ್ರಾಪಂ ಚುನಾವಣೆ: ಬಂಟ್ವಾಳದ 13, ಮಂಗಳೂರಿನ 4 ಸೇರಿ 17 ಮತದಾನ ಕೇಂದ್ರಗಳ ಸ್ಥಳಾಂತರ

ಬಂಟ್ವಾಳ: ಬಂಟ್ವಾಳ ತಾಲೂಕಿನ 13 ಮತ್ತು ಮಂಗಳೂರು ತಾಲೂಕಿನ 4 ಮತದಾನ ಕೇಂದ್ರಗಳು ಸೇರಿ ಒಟ್ಟು 17 ಮತದಾನ ಕೇಂದ್ರಗಳನ್ನು ಸ್ಥಳಾಂತರ ಮಾಡಲು ರಾಜ್ಯ ಚುನಾವಣಾ ಆಯೋಗ ಸೂಚಿಸಿದೆ. ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳ ಮತಗಟ್ಟೆ ಕೇಂದ್ರಗಳನ್ನು ಪರಿಶೀಲಿಸಿದಾಗ, ಮತಗಟ್ಟೆ ಕೇಂದ್ರಗಳು ಶಿಥಿಲಗೊಂಡಿರುವುದು, ಮತದಾರರಿಗೆ ದೂರವಾದ ಜಾಗ ಹಾಗೂ ಕೆಲ ಖಾಸಗಿ ಶಾಲಾ ಕಟ್ಟಡಗಳ ರಿಪೇರಿ ಇರುವ ಕಾರಣ, ಮತದಾನಕ್ಕೆ ಯೋಗ್ಯವಲ್ಲದ ಕಾರಣ ಬದಲಾವಣೆ ಮಾಡುವುದು ಸೂಕ್ತವೆಂದು ಹೊಸ ಮತದಾನ ಕೇಂದ್ರಗಳಿಗೆ ಸ್ಥಳಾಂತರಿಸಲು ಅನುಮೋದನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಕೋರಿಕೊಂಡ ಹಿನ್ನೆಲೆಯಲ್ಲಿ ಆಯೋಗ ಈ ಸೂಚನೆ ಹೊರಡಿಸಿದೆ.

ಬಂಟ್ವಾಳ ತಾಲೂಕು: ಬದಲಾದ ಮತಗಟ್ಟೆ ಸಂಖ್ಯೆ ಮತ್ತು ಕೇಂದ್ರಗಳು ಹೀಗಿವೆ. 142 ಸಜಿಪಪಡು ತಲೆಮೊಗರು ನಲಿಕಲಿ ಕಟ್ಟಡ, 146 ಫಜೀರು ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ, 184 ಮಾಣಿ ದ.ಕ.ಜಿಪಂ ಶಾಲೆ ಹೊಸ ಕಟ್ಟಡ, 185 ಮಾಣಿ ದ.ಕ.ಜಿಪಂ ಮಾದರಿ ಹಿ.ಪ್ರಾ.ಶಾಲೆ ಉತ್ತರ ಭಾಗ, 193 ಅನಂತಾಡಿ ಬಾಬನಕಟ್ಟೆ ದ.ಕ.ಜಿಪಂ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಕೊಠಡಿ ಸಂಖ್ಯೆ 1, 193ಎ, ಅದೇ ಶಾಲೆಯ ಪೂರ್ವಭಾಗ, 159 ನರಿಂಗಾನ ಕಲ್ಮಿಂಜ ಹಿ.ಪ್ರಾ.ಶಾಲೆ, 161 ತೌಡುಗೋಳಿ ಅಂಗನವಾಡಿ ಕೇಂದ್ರ, 162 ನರಿಂಗಾನ ಗ್ರಾಪಂ ಹಳೇ ಕಟ್ಟಡ, 204 ಸುವರ್ಣ ಕರ್ನಾಟಕ ದ.ಕ.ಜಿಪಂ ಹಿರಿಯ ಪ್ರಾ.ಶಾಲೆ ಉತ್ತರ ಭಾಗ ಇಡ್ಕಿದು ಗ್ರಾಮ, 209, ಇಡ್ಕಿದು ಗ್ರಾಪಂ ಸಮುದಾಯ ಭವನ, 252 ಸತ್ಯಸಾಯಿ ಲೋಕಸೇವಾ ಪಪೂ ಕಾಲೇಜು ಅಳಿಕೆಯ ಹೊಸ ಕಟ್ಟಡ, 253 ಸತ್ಯಸಾಯಿ ಪಪೂ ಕಾಲೇಜು ಹೊಸ ಕಟ್ಟಡದ ಪೂರ್ವಭಾಗ

ಮಂಗಳೂರು ತಾಲೂಕು: ಮಂಗಳೂರು ತಾಲೂಕಿನ ಮತಗಟ್ಟೆ ಸಂಖ್ಯೆ 143ನ್ನು ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ನೆರವಿನ ಪಾಲಿಟೆಕ್ನಿಕ್ ಉತ್ತರ ಭಾಗ, 143 ಎ ಅದೇ ಪಾಲಿಟೆಕ್ನಿಕ್ ನ ಪಶ್ಚಿಮ ಭಾಗ, 173 ನವಚೇತನ ಇಂಗ್ಲೀಷ್ ಮೀಡಿಯಂ ಶಾಲೆ ಪೂರ್ವಭಾಗ, ಹಾಗೂ 174 ನವಚೇತನಾ ಇಂಗ್ಲೀಷ್ ಮಾಧ್ಯಮ ಶಾಲೆಯ ಪೂರ್ವಕಟ್ಟಡದ ದ.ವಿಂಗ್ ರೂಂ ಆಗಿ ಬದಲಾವಣೆ ಹೊಂದಿರುತ್ತದೆ.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.