ಮಿಸ್ ಕಾಲ್ ನೀಡಿ, ಪ್ರಶ್ನೆಗಳಿಗೆ ಉತ್ತರಿಸಿ, ಬಹುಮಾನ ಗೆಲ್ಲಿ ಕಾರ್ಯಕ್ರಮಕ್ಕೆ ಸಚಿವ ಎಸ್. ಸುರೇಶ್ ಕುಮಾರ್ ಚಾಲನೆ
ಬೆಂಗಳೂರು: ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳಿಗಾಗಿ ವಿದ್ಯಾವಿನ್ ಟೋಲ್ ಫ್ರೀ ನಂಬರ್ 1800 5724 920 ಸರ್ವ ಶಿಕ್ಷಣ ಅಭಿಯಾನ ಕಚೇರಿ ಸಭಾಂಗಣದಲ್ಲಿ ಬುಧವಾರ ಲೋಕಾರ್ಪಣೆಗೊಂಡಿತು.
ಆನ್ಲೈನ್ ಶಿಕ್ಷಣ – ಕಲಿಕಾ ಮಟ್ಟ ಅರಿಯುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕೋವಿಡ್ ಮಹಾಮಾರಿ ಎಲ್ಲಾ ಕ್ಷೇತ್ರಗಳ ಮೇಲೂ ಕರಾಳ ಛಾಯೆ ಬೀರಿದೆ. ಶಿಕ್ಷಣ ಕ್ಷೇತ್ರ, ಶಾಲೆಗಳ ಮೇಲೆ ಇದರ ಕರಿಛಾಯೆ ಹೆಚ್ಚೇ ವ್ಯಾಪಿಸಿದೆ. ಮಕ್ಕಳ ಪರಿಸ್ಥಿತಿಯನ್ನು ನೋಡಿದರೆ ಬೇಸರವಾಗುತ್ತಿದೆ. ಶಾಲೆಗಳು ಪ್ರಾರಂಭ ಆಗದೇ ಇರುವುದರಿಂದ ಬಾಲಕಾಮರ್ಿಕ, ಬಾಲ್ಯವಿವಾಹ ಪದ್ಧತಿಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ರೀತಿ ಗೊಂದಲದ ವಾತಾವರಣ ನಿಮರ್ಾಣವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾವಿನ್ ಟೋಲ್ ಫ್ರೀ 1800 5724 920 ನಂಬರ್ ಮೂಲಕ ಮಕ್ಕಳಿಗೆ ಕಲಿಯಬೇಕು ಎನ್ನುವ ಇಚ್ಛೆ ಮೂಡಿಸಲು ಹೊರಟಿರುವ ವಿದ್ಯಾವಿನ್ ಯೋಜನೆ ಶ್ಲಾಘನೀಯ ಎಂದರು.
ವಿದ್ಯಾವಿನ್ ಶಿಕ್ಷಣ ಕಾರ್ಯಕ್ರಮದ ಸಂಸ್ಥಾಪಕ ಹಾಗೂ ಪ್ರವರ್ತಕ ಕೆ.ವಿ. ಪ್ರಕಾಶ್ ಮಾತನಾಡಿ, ವಿದ್ಯಾವಿನ್ ಶಿಕ್ಷಣ ಕಾರ್ಯಕ್ರಮ ಗ್ರಾಮೀಣ ಹಾಗೂ ನಗರ ವಿದ್ಯಾಥರ್ಿಗಳ ನಡುವಿನ ಅಂತರವನ್ನು ಸರಿದೂಗಿಸುವ ಯೋಜನೆ. ಗ್ರಾಮೀಣ ಭಾಗ ಸೇರಿದಂತೆ ರಾಜ್ಯದಲ್ಲಿ ಆನ್ಲೈನ್ ಶಿಕ್ಷಣ ವಿದ್ಯಾಥರ್ಿಗಳಿಗೆ ತಲುಪಿದ ಮಟ್ಟವನ್ನು ತಿಳಿಯುವ ಮೊದಲ ಪ್ರಯತ್ನ ಇದಾಗಿದೆ ಎಂದರು. ವಿದ್ಯಾವಿನ್ ಶಿಕ್ಷಣ ಕಾರ್ಯಕ್ರಮದ ಸಹಸಂಸ್ಥಾಪಕಿ ವಿ.ಎಸ್. ಲತಾ ಉಪಸ್ಥಿತರಿದ್ದರು.
ಸ್ಪರ್ಧಾ ವಿಧಾನ ಹೀಗಿದೆ: ಈ ಟೋಲ್ ಫ್ರೀ ನಂಬರ್ 1800 5724 920ಗೆ ರಾಜ್ಯ ಪಠ್ಯಕ್ರಮದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮಿಸ್ ಕಾಲ್ ಕೊಟ್ಟರೆ ಸಾಕು. ಅವರ ಮೊಬೈಲ್ಗೆ 3 ವಿಷಯ (ಗಣಿತ, ವಿಜ್ಞಾನ, ಸಮಾಜವಿಜ್ಞಾನ)ಗಳ ತಲಾ 12 ಬಹು ಆಯ್ಕೆಯ ಪ್ರಶ್ನೆಗಳು ರವಾನೆಯಾಗುತ್ತವೆ. ಜನವರಿ 15ರೊಳಗೆ ಇವುಗಳಿಗೆ ಉತ್ತರ ಕಳುಹಿಸಬೇಕು. ಆಯ್ಕೆಯಾದ ಪ್ರತಿ ಜಿಲ್ಲೆಯ 3 ಮಂದಿಗೆ ಟ್ಯಾಬ್ ಸಹಿತ ಸೂಕ್ತ ಬಹುಮಾನ ಸಿಗಲಿದೆ