ಪುಂಜಾಲಕಟ್ಟೆ

ಬಾಚಕೆರೆ ಭ್ರಮರಾಂಬಿಕ ಸೇವಾ ಸಂಘ ಶ್ರೀ ಕ್ಷೇತ್ರ ಕಟೀಲಿಗೆ ಪಾದಯಾತ್ರೆ

ಮಣಿನಾಲ್ಕೂರು ಗ್ರಾಮದ ಬಾಚಕೆರೆ   ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ   ಶ್ರೀ ಭ್ರಮರಾಂಬಿಕ ಸೇವಾ ಸಂಘ   ಇದರ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ  ಶ್ರೀ ಕ್ಷೇತ್ರ ಕಟೀಲಿಗೆ ದ್ವಿತೀಯ ವರ್ಷದ ಪಾದಯಾತ್ರೆ ಅಮ್ಮನೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ  ಗುರುವಾರ  ಶ್ರೀ ಕ್ಷೇತ್ರ ಬಾಚಕೆರೆಯಲ್ಲಿ ಚಾಲನೆ ನೀಡಲಾಯಿತು.  
 ಕ್ಷೇತ್ರದ ಧರ್ಮದರ್ಶಿ ದೇಚಪ್ಪ ಬಾಚಕೆರೆ ಅವರು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಶ್ರೀ ಭ್ರಮರಾಂಬಿಕಾ ಸೇವಾ ಸಂಘದ ಮೂಲಕ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕ್ಷೇತ್ರ ಕಟೀಲಿಗೆ ನಡೆಸುವ ಪಾದಯಾತ್ರೆ ಸೇವೆಯಿಂದ ಸರ್ವರಿಗೂ ಮಂಗಳವಾಗಲಿ ಎಂದು  ಶುಭ ಹಾರೈಸಿದರು.  
 ದೇವಸ್ಥಾನದ ಪ್ರ. ಅರ್ಚಕ ಪ್ರಸಾದ್ ಐತಾಳ್ ಸರಪಾಡಿ ಅರಮನೆ, ಪ್ರಮುಖರಾದ ಶಂಕರ ನಾರಾಯಣ ಹೊಳ್ಳ ಸರಪಾಡಿ, ಸಾಯಿ ಶಾಂತಿ ಕೋಕಲ, ಪ್ರಸಾದ್ ಶಾಂತಿ ಬಲಯೂರು, ಸರಪಾಡಿ ಅಶೋಕ ಶೆಟ್ಟಿ, ಪುರುಷೋತ್ತಮ ಪೂಜಾರಿ ಮಜಲು, ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್ ಗುತ್ತು, ಸಂತೋಷ್ ಶೆಟ್ಟಿ ಸರಪಾಡಿ, ಶ್ರೀ ಭ್ರಮರಾಂಬಿಕಾ ಸೇವಾ ಸಂಘದ ಅಧ್ಯಕ್ಷ ಪ್ರದೀಪ್ ರೈ ಮಾವಿನಕಟ್ಟೆ,  ಪದಾಧಿಕಾರಿಗಳಾದ ಪುರುಷೋತ್ತಮ ಕಾಯರ್ ಪಲ್ಕೆ, ಶಿವರಾಮ ಶೆಟ್ಟಿ ದೋಟ, ಮೋನಪ್ಪ ಪೂಜಾರಿ ಮತ್ತಿತರರು ಭಾಗವಹಿಸಿದ್ದರು. ಪಾದಯಾತ್ರೆಯಲ್ಲಿ ೯೦ ಮಂದಿ ಭಕ್ತರು ಪಾಲ್ಗೊಂಡಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts