ಫರಂಗಿಪೇಟೆ

ಫರಂಗಿಪೇಟೆಯಲ್ಲಿ “ಲೈಫ್ ಕೇರ್” ಹೆಲ್ತ್ ಸೆಂಟರ್ ಶುಭಾರಂಭ

1 / 22

ಉದ್ಘಾಟನಾ ಸಮಾರಂಭದ ಚಿತ್ರಗಳು ಇವು

ಫರಂಗಿಪೇಟೆ: ಸಾಮಾಜಿಕ ಕಾಳಜಿ ಇರುವ ಇಬ್ಬರು ಯುವಕರು, ಊರಿನ ಪರ ಕಾಳಜಿಯುಳ್ಳ ವಿದೇಶದಲ್ಲಿರುವ ಉದ್ಯಮಿ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಜಂಕ್ಷನ್ ನ ಬಸ್ ನಿಲ್ದಾಣ ಸಮೀಪದಲ್ಲೇ ಲೈಫ್ ಕೇರ್ ಹೆಲ್ತ್ ಸೆಂಟರ್ ಆರಂಭಿಸಿದ್ದಾರೆ.

ಸಮಾಜಸೇವಕ ಆಶಿಕ್ ಕುಕ್ಕಾಜೆ, ಚಿಕಿತ್ಸಾ ಲ್ಯಾಬ್ ನಲ್ಲಿ ಅನುಭವವಿರುವ ಯುವಕ ಮುಖ್ತಾರ್ ಅಮ್ಮೆಮ್ಮಾರ್ ಜೊತೆ ವಿದೇಶದಲ್ಲಿರುವ ಉದ್ಯಮಿ ಶೌಕತ್ ಅಲಿ ಬಂಟ್ವಾಳ ಸೇರಿಕೊಂಡು ಲೈಫ್ ಕೇರ್ ಆರಂಭಿಸಿದ್ದು, ಇದರ ಉದ್ಘಾಟನೆಯು ಸೋಮವಾರ ನಡೆಯಿತು.

ಬಡ/ಅಶಕ್ತ ಜನತೆಗೆ ಗುಣಮಟ್ಟದ ಚಿಕಿತ್ಸೆ, ರೋಗಿಗಳು ತುಂಬಾ ಸಮಯ ಶುಶ್ರೂಷೆಗೆ ಕಾಯದೇ ಸುಲಭದಲ್ಲಿ ಚಿಕಿತ್ಸೆ ಪಡೆಯಬೇಕು. ಕಡಿಮೆ ಖರ್ಚಲ್ಲಿ ಎಲ್ಲಾ ಪ್ರಾಥಮಿಕ ಸೌಲಭ್ಯಗಳು ಸಿಗಬೇಕೆಂಬ ನಿಟ್ಟಿನಲ್ಲಿ ಈ ಹೆಲ್ತ್ ಸೆಂಟರ್ ಆರಂಭಿಸಲಾಗಿದೆ. ಜಿಲ್ಲೆಯ ಪ್ರಸಿದ್ಧ ವೈದ್ಯಕೀಯ ತಜ್ಞರು, ಥೈರಾಯ್ಡ್ ಸ್ಪೆಶಲಿಸ್ಟ್, ಮಹಿಳಾ ಮತ್ತು ಮಕ್ಕಳ ತಜ್ಞರು, ಇಎನ್ ಟಿ ವೈದ್ಯರು, ಚರ್ಮರೋಗ ತಜ್ಞರು, ವಿವಿಧ ಕಾಯಿಲೆಗಳ ಸರ್ಜನ್, ಹೊಲಿಗೆ ರಹಿತ ಮುಂಜಿ ತಜ್ಞರು ಮುಂತಾದವರು ಇಲ್ಲಿ ವೈದ್ಯಕೀಯ ಸೇವೆ ನೀಡಲಿದ್ದಾರೆ. ಕಂಪ್ಯೂಟರೀಕೃತ ಲ್ಯಾಬ್, ಡೇ ಕೇರ್, ಇಸಿಜಿ, ನೆಬ್ಯುಲೈಝೇಶನ್, ಹೊಲಿಗೆ ರಹಿತ ಮುಂಜಿ ಕರ್ಮ ಇಲ್ಲಿನ ವಿಶೇಷತೆ. ನೀವಿರುವಲ್ಲಿಂದಲೇ ರಕ್ತದ ಮಾದರಿ ಸಂಗ್ರಹಿಸಿ ಅದರ ವರದಿಯನ್ನು ಆನ್ ಲೈನ್ ನಲ್ಲೇ ನಿಮಗೆ ತಲುಪಿಸುವ ವ್ಯವಸ್ಥೆಯೂ ಇಲ್ಲಿದೆ. 9741412102/8970064242 ಕರೆ ಮಾಡಿ ಕಾಯ್ದಿರಿಸುವಿಕೆ ಖಚಿತಪಡಿಸಬಹುದು. ಉದ್ಘಾಟನೆ ಪ್ರಯುಕ್ತ ಉಚಿತ ಬ್ಲಡ್ ಗ್ರೂಪಿಂಗ್, ಬ್ಲಡ್ ಶುಗರ್, ಬ್ಲಡ್ ಪ್ರೆಶರ್ ಹಾಗೂ ಉಚಿತ ಇಸಿಜಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಂದ ಅತಿಥಿಗಳಿಗೆ ಸಸಿಗಳ ಹೂಕುಂಡವನ್ನು ನೀಡುವ ಮೂಲಕ ಪರಿಸರ ಸಂರಕ್ಷಣೆಯ ಕಾಳಜಿಯನ್ನು ತೋರಲಾಗಿತ್ತು.

ಡಯಾಗ್ನೋಸ್ಟಿಕ್ ಲ್ಯಾಬ್ ಉದ್ಘಾಟನೆಯನ್ನು ಅಬ್ಬಾಸ್ ದಾರಿಮಿ ಪರಂಗಿಪೇಟೆ, ಫಾದರ್ ಜೆರಾಲ್ಡ್ ಲೋಬೋ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಉದ್ಘಾಟಿಸಿ ಶುಭ ಹಾರೈಸಿದರು. ಪಾಲಿಕ್ಲಿನಿಕ್ ಉದ್ಘಾಟನೆಯನ್ನು ಆಯಿಷಾ ಅಬ್ದುಲ್ಲಾ  ನೆರವೇರಿಸಿದರು. ಹಾಜಿ ಮೊಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಗ್ರಾಮಾಂತರ ಠಾಣಾ ಎಸ್.ಐ ಪ್ರಸನ್ನ ಎಂ ಎಸ್, ಸೇವಾಂಜಲಿ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜಾ, ಡಾ. ಅಬ್ದುರ್ರಶೀದ್ ಝೈನಿ ಖಾಮಿಲ್, ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಉಮ್ಮರ್ ಫಾರೂಕ್ ಮತ್ತು ಎಸ್ ಡಿ ಪಿ ಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ, ಜೆಡಿಎಸ್ ನಾಯಕ ಮಹಮ್ಮದ್ ಶಫಿ ಮೊದಲಾದವರು ಉಪಸ್ಥಿತರಿದ್ದರು.ಶಫಿಕ್ ಮೌಲವಿ ಕುಕ್ಕಾಜೆ ಕಿರಾತ್ ಪಠಿಸಿದರು, ರಶೀದ್ ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪಾಲುದಾರ ಆಶಿಕ್ ಕುಕ್ಕಾಜೆ, ಮುಖ್ತಾರ್ ಅಮೆಮಾರ್ ಸಹಕರಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts