ಜಿಲ್ಲಾ ಸುದ್ದಿ

ಪುತ್ತೂರಿನ ವಿಷನ್ ಸೇವಾ ಟ್ರಸ್ಟ್ ನಿಂದ ಒಳಿತು ಮಾಡು ಮನುಷ್ಯ ಕಾರ್ಯಕ್ರಮ

ಪುತ್ತೂರು: ಕಿಡ್ನಿ ವೈಫಲ್ಯ ದಿಂದ ಬಳಲುತ್ತಿರುವವರಿಗೆ ಮತ್ತು ದಾನಿಗಳ ಸಹಕಾರದಿಂದ ಪ್ರತಿ ತಿಂಗಳು ದಿನಸಿ ಸಾಮಗ್ರಿಗಳ ಕಿಟ್ ನೀಡುವ ಮಾಸಿಕ ಯೋಜನೆ ಒಳಿತು ಮಾಡು ಮನುಷ್ಯದ ನವೆಂಬರ್ ತಿಂಗಳ ಕಾರ್ಯಕ್ರಮ ನವೆಂಬರ್ 29ರಂದು ಪುತ್ತೂರಿನ ರೋಟರಿ ಜಿ.ಎಲ್. ಸಭಾಭವನ ರೂಫ್ ಟಾಪ್ ಹಾಲ್ ನಲ್ಲಿ ನಡೆಯಿತು.

ವಿಷನ್ ಸಹಾಯ ನಿಧಿ ಸೇವಾ ಟ್ರಸ್ಟ್ ನ ಯೋಜನೆಯಾದ ಈ ಕಾರ್ಯಕ್ರಮದಲ್ಲಿ 48 ಬಡ ರೋಗಿಗಳಿಗೆ 1,000 ರೂಪಾಯಿ ಫುಡ್ ಕಿಟ್ ನೀಡಲಾಯಿತು. ಮರದಿಂದ ಬಿದ್ದು ಬೆನ್ನು ಮೂಳೆ ಮುರಿತ ಕೊಳಕ್ಕಾದ ಪುತ್ತೂರು ತಾಲೂಕು ನಗರ ಸಭಾ ವ್ಯಾಪ್ತಿಯ ಕರ್ಕುಂಜ ನಿವಾಸಿ ಹರಿಶ್ಚಂದ್ರ ಅವರಿಗೆ ರೂ 5,000ದ ಚೆಕ್ ಮತ್ತು ಫುಡ್ ಕಿಟ್, ,ಮರದಿಂದ ಬಿದ್ದು ಬೆನ್ನು ಮೂಳೆ ಮುರಿತ ಗೊಂಡು ಮಲಗಿದ್ದಲ್ಲೆ ಇರುವ ತೆಕ್ಕಡ್ಕ ಮನೆ ಕೊಡಿಂಬಾಳ ಕಡಬ ದ ಆನಂದ ಅವರಿಗೆ ರೂ.5,000ದ ಚೆಕ್ ಮತ್ತು ಫುಡ್ ಕಿಟ್ ವಿತರಣೆ, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮುರದಾಚಡವು ಮನೆ ಕೋಡಿಂ ಬಾಳ ಕಡಬ ದ ವೇದಾವತಿಯವರಿಗೆ ರೂ 5,000ದ ಚೆಕ್ ಮತ್ತು ಫುಡ್ ಕಿಟ್ ವಿತರಣೆ ಹಾಗೂ ತುರ್ತು ಯೋಜನೆಯಾಗಿ ಕಿಡ್ನಿ ವೈಫಲ್ಯ ಧಿಂದ ಬಳಲುತ್ತಿರುವ ಅರ್ಲ ನೆಲ್ಯಾಡಿ ಯ ಸುರೇಶ್ ರವರಿಗೆ 1,500 ನಗದು ಮತ್ತು ಫುಡ್ ಕಿಟ್ ನ್ನೂ ವಿತರಿಸಲಾಯಿತು.

ಟ್ರಸ್ಟ್ ನ ದಾನಿ ಯದ ರಾಮಚಂದ್ರ ಭಟ್ ಮಡ್ಯಂಗಳ, ಗೌರವ ಸಲಹೆಗಾರರಾದ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್, ಕಲಾವಿದ ಕೃಷ್ಟಪ್ಪ  ಶಿವನಗರ, ಮಹಮ್ಮದ್ ಬಶೀರ್, ಗೌರವಾದ್ಯಕ್ಷ ಶರತ್ ಕುಮಾರ್, ಸಂಚಾಲಕರಾದ ದಿಲೀಪ್ ಕುಮಾರ್, ಅಧ್ಯಕ್ಷರಾದ ಚೇತನ್ ಕುಮಾರ್ ಪುತ್ತೂರು, ಕಾರ್ಯದರ್ಶಿ ಮೋಹನ ಸಿಂಹವನ, ಖಜಾಂಚಿ ಶೋಭಾ, ಉಪಾಧ್ಯಕ್ಷರಾದ ಸ್ವಾತಿ,  ಜ್ಯೋತಿ, ಕಾರ್ಯದರ್ಶಿ ಸರಸ್ವತಿ, ಜೊತೆ ಕಾರ್ಯದರ್ಶಿ ಸೀತಾ, ಸಂಘಟನೆ ಕಾರ್ಯದರ್ಶಿ ಗೀತಾಂಜಲಿ ಮತ್ತು ಸದಸ್ಯರಾದ  ಮುನ್ನ ಹಾಜರಿದ್ದರು. ರೋಟರಿ ಕ್ಲಬ್ ಪುತ್ತೂರು ಉಚಿತವಾಗಿ ಸಭಾಂಗಣವನ್ನು ಕಾರ್ಯಕ್ರಮಕ್ಕೆ ನೀಡಿದ್ದರು.ಕಾರ್ಯಕ್ರಮವನ್ನು ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

8 hours ago