ಬಂಟ್ವಾಳ: ಗ್ರಾಮ ಪಂಚಾಯತ್ ಕುಕ್ಕಿಪಾಡಿ ಮತ್ತು ಶ್ರೀ ಕ್ಷೇ.ಧ. ಗ್ರಾ.ಯೋ. ಬಿ ಸಿ ಟ್ರಸ್ಟ್(ರಿ); ಬಂಟ್ವಾಳ, ಸಿದ್ಧಕಟ್ಟೆ ವಲಯ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಬದ್ಯಾರು ಕೆರೆಯನ್ನು ನಮ್ಮೂರು – ನಮ್ಮ ಕೆರೆ ಕಾರ್ಯಕ್ರಮದ ಅಡಿಯಲ್ಲಿ ಹೂಳು ತೆಗೆದು ಅಭಿವೃದ್ಧಿಪಡಿಸಲು ಊರಿನ ಗಣ್ಯರನ್ನು ಸೇರಿಸಿ ಸಮಿತಿ ರಚಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಊರಿನ ಜಲಮೂಲವಾದ ಕೆರೆಗಳ ಮಹತ್ವ ಮತ್ತು ಅಗತ್ಯ, ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾದ ಅನಿವಾರ್ಯತೆಗಳ ಬಗ್ಗೆ ವಿವರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಿ ಜಯಾನಂದ ಧರ್ಮಸ್ಥಳದಿಂದ ಪ್ರವರ್ತಿತವಾಗುವ ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜಲಮೂಲ ಸಂರಕ್ಷಣೆಯೂ ಒಂದು ಎಂದು ಹೇಳಿದರು. ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ಸ್ಥಳೀಯ ಗಣ್ಯರನ್ನು ಸೇರಿಸಿಕೊಂಡು ಸಮಿತಿ ರಚಿಸಲಾಯಿತು. ಸುರೇಶ್ ಶೆಟ್ಟಿ ಕುತ್ಲೋಡಿ ಅದ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಶೇಖರ್ ಮತ್ತು ಕೋಶಾಧಿಕಾರಿಯಾಗಿ ಸುಂದರ ಅವರನ್ನು ಆಯ್ಕೆ ಮಾಡಿ ಯೋಜನೆಯ ಮಾಹಿತಿ ಪತ್ರ ವಿತರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ತುಳಸಿ, ಆಡಳಿತಾಧಿಕಾರಿ ಪ್ರದೀಪ್ ಡಿಸೋಜ, ಜಿ.ಪ.ಸದಸ್ಯ ತುಂಗಪ್ಪ ಬಂಗೇರ, ತಾ.ಪ. ಸದಸ್ಯ ಪ್ರಭಾಕರ ಪ್ರಭು, ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಸತ್ಯನಾರಾಯಣ ಸೇವಾ ಸಮಿತಿ ಮುರದಮೇಲು ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಎಂಜಿನಿಯರ್ ವಿಕೇಶ್ ಶೆಟ್ಟಿ, ಕುಕ್ಕಿಪಾಡಿ ಬಿ ಒಕ್ಕೂಟ ಅಧ್ಯಕ್ಷೆ ಸುಜಾತ ರಾಜು ಪೂಜಾರಿ, ತಾಲೂಕು ಕೃಷಿ ಅಧಿಕಾರಿ ಜನಾರ್ಧನ್, ಸೇವಾ ಪ್ರತಿನಿಧಿ ಹೇಮಲತಾ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ಸ್ವಾಗತಿಸಿ ನಿರೂಪಿಸಿದರು.