ಬಂಟ್ವಾಳ: ಎರಡು ದಿನಗಳ ಹಿಂದೆ ಕಲ್ಲಡ್ಕ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹಿಂದು ಸಂಘಟನೆ ಕಾರ್ಯಕರ್ತ ಯತಿರಾಜ್ ಕಲ್ಲಡ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆ ವಿಶ್ವಹಿಂದೂ ಪರಿಷತ್-ಬಜರಂಗದಳ ಕಲ್ಲಡ್ಕ ವಲಯ ವತಿಯಿಂದ ಬುಧವಾರ ಸಂಜೆ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಂಗಣದಲ್ಲಿ ನಡೆಯಿತು.ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಮೃದುಹೃದಯಿಯಾಗಿರುವ ನಿಷ್ಟಾವಂತ ಕಾರ್ಯಕರ್ತನನ್ನು ನಾವು ಇವತ್ತು ಕಳೆದುಕೊಂಡಿದ್ದೇವೆ ಎಂದರು, ಸಂಘಟನೆಗಳ ಪ್ರಮುಖರಾದ ಕ. ಕೃಷ್ಣಪ್ಪ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…