ಬಂಟ್ವಾಳ : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ವತಿಯಿಂದ ಸ್ಕಾಲರ್ಶಿಪ್ ಮಂಜೂರಾತಿ ವಿಳಂಬ ಮತ್ತು ಅವ್ಯವಸ್ಥೆ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ, ಎಂ.ಫಿಲ್ ಫೆಲೋಶಿಪ್ ಕಡಿತಗೊಳಿಸಿರುವ ಸರಕಾರದ ಕ್ರಮ ವಿರುದ್ಧ ಕ್ಯಾಂಪಸ್ ಫ್ರಂಟ್ ಹಮ್ಮಿಕೊಂಡ “ಸ್ಕಾಲರ್ಶಿಪ್ ಕೊಡಿ” ರಾಜ್ಯವ್ಯಾಪಿ ವಿದ್ಯಾರ್ಥಿ ಆಂದೋಲನದ ಭಾಗವಾಗಿ ಪ್ರತಿಭಟನಾ ಸಭೆಯು ಬಿಸಿ ರೋಡಿನ ಫ್ಲೈ ಓವರ್ ಕೆಳಗಡೆ ನಡೆಯಿತು.
ಕ್ಯಾಂಪಸ್ ಫ್ರಂಟ್ ಬಂಟ್ವಾಳ ಅಧ್ಯಕ್ಷ ಫಹದ್ ಅನ್ವರ್ ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡ ಸವಾದ್ ಕಲ್ಲರ್ಪೆ ಮಾತನಾಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವತ್ತ ಸರಕಾರಗಳು ಗಮನಹರಿಸಲಿ ಎಂದರು. ವಿದ್ಯಾರ್ಥಿ ವೇತನ ಸಿಗದಿರುವ ಸಂತ್ರಸ್ತೆ ವಿದ್ಯಾರ್ಥಿನಿ ಸಹಲಾ ಮಾತನಾಡಿದರು. ಸ್ಕಾಲರ್ಶಿಪ್ ಮೊತ್ತ ಸಿಗದೇ ಕಷ್ಟ ಅನುಭವಿಸುವ ವಿದ್ಯಾರ್ಥಿಗಳ ಚಿತ್ರನಗಳನ್ನು ಬಿಂಬಿಸುವ ‘ಸ್ತಬ್ದ ಚಿತ್ರ’ ವನ್ನು ಈ ಸಂಧರ್ಭ ಪ್ರದರ್ಶಿಸಲಾಯಿತು.
ಕಾರ್ಯದರ್ಶಿ ಸಾಬಿತ್, ತಾಲೂಕು ಸಮಿತಿ ಸದಸ್ಯರಾದ ಐಮಾನ್, ಫಾರೂಕ್, ನಿಯಾಬ್, ಹಮೀದ್,ಹಾಶಿಮ್, ಸಜ್ಜಾದ್ ನಿಯಾಜ್, ಇರ್ಷಾದ್, ಸಫ್ವಾನ್ ಹಮ್ದನ್ , ಸಫ್ರೀನ, ಅಸೀಬಾ ಮತ್ತಿತರರು ಉಪಸ್ಥಿತರಿದ್ದರು. ಅಶ್ಪಾಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.