ಬಂಟ್ವಾಳ: ಶಂಭೂರು ಗ್ರಾಮದಲ್ಲಿ ಸುಮಾರು 71 ಲಕ್ಷ ರೂ ವೆಚ್ಚದ ವಿವಿಧ ಕಾಮಗಾರಿಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೋಮವಾರ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿದರು. 20 ಲಕ್ಷ ವೆಚ್ಚದಲ್ಲಿ ಶಂಭೂರು ಕೂಡಿಬೆಟ್ಟು ರಸ್ತೆ, 5 ಲಕ್ಷ ವೆಚ್ಚದಲ್ಲಿ ಮಂಜನಕೋಡಿ ರಸ್ತೆ , 10 ,ಲಕ್ಷ ವೆಚ್ಚದಲ್ಲಿ ಕುಂದಾಯಗೋಳಿ ಮಂಜಿಪಾಲ್ ಜೋಗಿಬೆಟ್ಟು ರಸ್ತೆ , 20 ಲಕ್ಷ ವೆಚ್ಚದಲ್ಲಿ ಬೈಪಾಡಿ ಶಿರ್ಡಿ ರಸ್ತೆ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು. 16 ಲಕ್ಷ ವೆಚ್ಚದಲ್ಲಿ ಶಂಭೂರು ಶೇಡಿ ಗುರಿ ನೂತನ ಅಂಗನವಾಡಿ ಕಟ್ಟಡ ಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಶಂಭೂರು ಇರಂತಬೆಟ್ಟು ಸುಧೆಕಾರ್ ರಸ್ತೆ ಹಾಗೂ ಶಂಭೂರು ಬರ್ಕೆ ಕಕ್ಕೆಮಜಲು ಮೂಲಕ ಕಲ್ಲಡ್ಕ ಸಂಪರ್ಕದ ರಸ್ತೆಯನ್ನು ವೀಕ್ಷಿಸಿದ ಶಾಸಕರು ಈಗಾಗಲೇ ಈ ರಸ್ತೆಯ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದ್ದು ಶೀಘ್ರವಾಗಿ ಮಂಜೂರಾತಿ ಮಾಡುವ ಭರವಸೆ ನೀಡಿದರು. ಶಂಭೂರಿನ ಬೈಪಾಡಿ ದಕ್ಷಿಣ ಶಿರ್ಡಿ ಮಂದಿರದಕ್ಕೆ ಬೇಟಿ ನೀಡಿದ ವೇಳೆ ಶಾಸಕರನ್ನು ಸನ್ಮಾನಿಸಲಾಯಿತು.
ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಹಿಂದುಳಿದ ಮೋರ್ಚಾದ ಅಧ್ಯಕ್ಷ ಆನಂದ ಶಂಭೂರು, ಗ್ರಾ.ಪಂ.ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಶಂಭೂರು ಬೂತ್ ಸಮಿತಿ ಅಧ್ಯಕ್ಷರುಗಳಾದ ಯೋಗೀಶ್ , ಸಂತೋಷ್, ಕಾರ್ಯದರ್ಶಿಗಳಾದ ಕೇಶವ, ಪ್ರಕಾಶ್, ಕ್ಷೇತ್ರ ಸಮಿತಿ ಸದಸ್ಯ ಜಿನರಾಜ್ ಕೋಟ್ಯಾನ್, ಪ್ರಮುಖರಾದ ದಿವಾಕರ ಶಂಭೂರು, ಉದಯರಾಜ, ಜಯರಾಜ, ಬೋಜರಾಜ್, ಜಿನ್ನಪ್ಪ, ಶಿರ್ಡಿ ಸಾಯಿ ಮಂದಿರದ ಅಧ್ಯಕ್ಷ ಸೂರಜ್ ಕುಮಾರ್ ಬೋಳಾರ ಮತ್ತಿತರ ರು ಉಪಸ್ಥಿತರಿದ್ದರು.