ಬಂಟ್ವಾಳ: ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಪೋಷಕರ ಗುರುಗಳ ಮಧ್ಯೆ ಹಿಂದಿನಂತೆ ಭಾವನಾತ್ಮಕ ಸಂಭಂದ ಹಳಸಿರುವುದು ದುರಂತ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಅಸಯ್ಯದ್ ಫಝಲ್ ಕೋಯಮ್ಮ ತಂಗಳ್ ಹೇಳಿದರು.
ಬದ್ರಿಯ ಜುಮ್ಮಾ ಮಸೀದಿ ಇರಾ ಬಾಳೆಪುಣಿ ಅಧೀನದಲ್ಲಿ ನಿರ್ಮಾಣಗೊಂಡ ನೂರುಲ್ ಇಸ್ಲಾಮ್ ಮದರಸದ ನೂತನ ಕಟ್ಟಡ ಉದ್ಘಾಟಿಸಿ ಸಂದೇಶ ನೀಡಿದರು. ಹಿರಿಯ ಧಾರ್ಮಿಕ ನಾಯಕರೂ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಖಮರುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ವಕ್ಫ್ ಬೋರ್ಡ್ ನಿರ್ದೇಶಕರಾದ ಅಲ್ಹಾಜ್ ಮೌಲಾನಾ ಶಾಫಿ ಸಹದಿಯವರು ಮಸೀದಿ,ಮದರಸ,ಮುಸ್ಲಿಂ ದಫನ ಭೂಮಿ ಅಭಿವೃದ್ಧಿಗೆ ಸರಕಾರವು ವಕ್ಫ್ ಇಲಾಖೆಯ ಮೂಲಕ ಅನುದಾನ ನೀಡುತ್ತಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳಲು ಮಸೀದಿ ಸಮಿತಿಗಳು ಮುಂದೆ ಬರಬೇಕಾಗಿದೆ ಎಂದರು. ಮಸೀದಿಯ ಧರ್ಮ ಗುರುಗಳಾದ ಅಲ್ಹಾಜ್ ಮುಹಮ್ಮದ್ ಅಲಿ ಫೈಝಿ ಅಧ್ಯಕ್ಷತೆ ವಹಿಸಿ ನೂತನ ಮದರಸ ಕಟ್ಟಡ ನಿರ್ಮಾಣದಲ್ಲಿ ಕೈಜೋಡಿಸಿದ ಎಲ್ಲರಿಗೂ ಕ್ರತಜ್ಞತೆ ಸಲ್ಲಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ಮತ್ತು ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ರಝಾಕ್ ಕುಕ್ಕಾಜೆ ವೇದಿಕೆಯಲ್ಲಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವರ್ಕಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ಮಜೀದ್,ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸಿ ಎಚ್ ಮಹಮ್ಮದ್, ಎಂ ಬಿ ಉಮ್ಮರ್,ಮುಡಿಪು ಸಂಯುಕ್ತ ಜಮಾತ್ ಅಧ್ಯಕ್ಷರಾದ ಉಮ್ಮರ್ ಸಖಾಫಿ, ಮುಡಿಪು ಎಸ್ ವೈ ಎಸ್ ಅಧ್ಯಕ್ಷರಾದ ಅಬೂಬಕ್ಕರ್ ಮದ್ಯನಡ್ಕ ,ಧರ್ಮ ಗುರುಗಳಾದ ಮೂಹಿಯುದ್ದೀನ್ ಖಾಮಿಲ್ ಸಖಾಫಿ, ಎಸ್ ವೈ ಎಸ್ ರಾಜ್ಯ ಅಧ್ಯಕ್ಷರಾದ ಉಸ್ಮಾನ್ ಸಹದಿ ಪಟ್ಟೋರಿ, ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಮಸೀದಿಯ ಕಾರ್ಯದರ್ಶಿ ಹಾಜಿ ಸಿ ಎಚ್ ಇಬ್ರಾಹಿಂ, ಕೋಶಾಧಿಕಾರಿ ಹಾಜಿ ಮಹಮ್ಮದ್ ,ಎಸ್ ಡಿ ಎಂ ಸಿ ಅಧ್ಯಕ್ಷರಾದ ಹಸೈನಾರ್ ಬಡದಲ, ದಫ್ ಕಮಿಟಿ ಅಧ್ಯಕ್ಷರಾದ ಸಿ ಎಂ ಅಬ್ದುಲ್ಲ ಹಾಜಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ಲ ಮುಸ್ಲಿಯಾರ್,ಎಸ್ ಎಸ್ ಎಫ್ ಅಧ್ಯಕ್ಷರಾದ ರಫೀಕ್ ಸೀ ಎಚ್, ನುಷ್ರತುಲ್ ಸಮಿತಿ ಅಧ್ಯಕ್ಷರಾದ ಅಜೀಜ್ ಮುಸ್ಲಿಯಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಸೀದಿಯ ಅಧ್ಯಕ್ಷರಾದ ಎಂ ಬಿ ಸಖಾಫಿ ಸ್ವಾಗತಿಸಿ ಪ್ರಸ್ಥಾಪನೆಗೈದರು. ಮುಸ್ತಫಾ ಸಹದಿ ಮುಸ್ಲಿಯಾರ್ ಧನ್ಯವಾದ ಸಲ್ಲಿಸಿ ಕಾರ್ಯಕ್ರಮ ನಿರೂಪಿಸಿದರು. ಇತ್ತೀಚೆಗೆ ನಿಧನರಾದ ಊರಿನ ಹಿರಿಯ ಗಣ್ಯರಾದ ಮರ್ಹೂಂ ಕುಜ್ಹಿ ಹಾಜಿಯವರ ಸ್ಮರಣಾರ್ಥ ಅನ್ನದಾನ ವಿತರಿಸಲಾಯಿತು.