ಬಂಟ್ವಾಳ: ಯುವಜನ ಸಬಲೀಕರಣ ನಿಗಮ ಸ್ಥಾಪಿಸಿ, ಪ್ರತಿಯೊಂದು ಜಾತಿ, ಧರ್ಮಗಳಿಗೆ ತೆರೆಯುವ ನಿಗಮ ಪ್ರಾಧಿಕಾರಗಳಿಂದ ಯಾರಿಗೂ ಪ್ರಯೋಜನ ಇಲ್ಲ. ರಾಜ್ಯದಲ್ಲಿರುವ 1.8 ಕೋಟಿ ಯುವಜನರ ಅಭಿವೃದ್ಧಿಯ ಹಿತದೃಷ್ಟಿಯಿಂದ ಯುವಜನರ ಸಬಲೀಕರಣ ನಿಗಮ ಸ್ಥಾಪಿಸಬೇಕು ಎಂದು ಅಖಿಲ ಭಾರತ ಯುವಜನ ಫೆಡರೇಶನ್ ಒತ್ತಾಯಿಸಿದೆ. ಈ ಕುರಿತು ಬಂಟ್ವಾಳ ತಾಲೂಕು ಸಮಿತಿಯಿಂದ ಅಧ್ಯಕ್ಷ ಪ್ರೇಮನಾಥ ಕೆ, ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ, ಕೋಶಾಧಿಕಾರಿ ಸುರೇಶ್ ಕುಮಾರ್ ಬಂಟ್ವಾಳ್, ಯುವನಾಯಕ ಹರ್ಷಿತ್ ಸುವರ್ಣ, ಸಾಮಾಜಿಕ ಕಾರ್ಯಕರ್ತ ಜನಾರ್ದನ ಕೆಸರಗದ್ದೆ, ಮತ್ತು ಬಾಬು ಭಂಡಾರಿ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.