ಬಂಟ್ವಾಳ

ಪಿಲಾತಬೆಟ್ಟು ವ್ಯ.ಸೇ.ಸ.ಸಂಘ ನೂತನ ಸಭಾಭವನ ಲೋಕಾರ್ಪಣೆ

 

 

ಬಂಟ್ವಾಳ: ತಾಲೂಕಿನ ಪುಂಜಾಲಕಟ್ಟೆಯಲ್ಲಿರುವ  ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯ  ಮೇಲಂತಸ್ತಿನಲ್ಲಿ ಸುಮಾರು 40 ಲ.ರೂ.ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಭಾಭವನ ಸುವಿಧ ಸಹಕಾರಿ ಭವನದ ಲೋಕಾರ್ಪಣೆ ಹಾಗೂ ದ.ಕ.ಜಿಲ್ಲಾ ಸಹಕಾರಿ ಸಪ್ತಾಹದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.  ಸಂಘದ ನೂತನ ಸಭಾಭವನ ಸುವಿಧ’ವನ್ನು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು  ದೀಪ ಬೆಳಗಿಸುವ ಮೂಲಕ  ಉದ್ಘಾಟಿಸಿದರು.

ಸಹಕಾರಿ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ,ಸಭಾಧ್ಯಕ್ಷತೆ ವಹಿಸಿದ ‘ಸಹಕಾರಿ ರತ್ನ’ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್  ಮಾತನಾಡಿ,ಕೊರೋನಾ ವಾರಿಯಸ್೯ಗಳಾದ ಆಶಾ ಕಾರ್ಯಕರ್ತೆಯರನ್ನು ಮಾದಲಿಗೆ  ಗುರುತಿಸಿದ ಜಿಲ್ಲೆ ನಮ್ಮದು,ಆರ್ಥಿಕ ಸೌಲಭ್ಯ ಒದಗಿಸಿ ಜೀವನವನ್ನು ಸದೃಢಗೊಳಿಸುವ ಸಹಕಾರಿ ಕ್ಷೇತ್ರದಿಂದಾಗಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಯಾವನೇ ಒಬ್ಬ ರೈತ ಆರ್ಥಿಕ ಹಿನ್ನಡೆಯಿಂದ ಆತ್ಮಹತ್ಯೆ ಮಾಡಿಕೊಂಡಂತ ಘಟನೆ ನಡೆಯದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಸಹಕಾರಿ ಕ್ಷೇತ್ರದ ಮೂಲಕ ರಾಜ್ಯದಾದ್ಯಂತ ಜನೌಷಧಿ ಕೇಂದ್ರ ತೆರೆಯುವ ಚಿಂತನೆ ಇದ್ದು,ಈಗಾಗಲೇ 500 ಕೇಂದ್ರಗಳ ಬೇಡಿಕೆ ಇದ್ದು,ಈ ಸಂದರ್ಭ ಪಿಲಾತಬೆಟ್ಟು ವ್ಯ.ಸೇ.ಸ.ಸಂಘಕ್ಕೆ ಜನೌಷಧಿ ಕೇಂದ್ರವನ್ನು ನೀಡುವುದಾಗಿ ಪ್ರಕಟಿಸಿದರಲ್ಲದೆ ಸಭಾಭವನದ ಅಭಿವೃದ್ಧಿಗೆ ಐದು ಲಕ್ಷ  ರೂ.ವನ್ನು ಘೋಷಿಸಿದರು.

ದ.ಕ.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ,  ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್,ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ಪದ್ಮಶೇಖರ ಜೈನ್,  ಬಂಟ್ವಾಳ ತಾ.ಕೃಷಿ ಉತ್ಪಾದಕರ ಸಹಕಾರ ಸಂಘ ನಿಯಮಿತದ ಅಧ್ಯಕ್ಷ, ಜಿಪಂ ಸದಸ್ಯ ರವೀಂದ್ರ ಕಂಬಳಿ, ಸಹಕಾರ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ.ನಾಯಕ್,  ಬಂಟ್ವಾಳ ಸಹಕಾರ ಅಭಿವೃದ್ಧಿ ಅಧಿಕಾರಿ ತ್ರಿವೇಣಿರಾವ್ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.

ಪುಂಜಾಲಕಟ್ಟೆ ಠಾಣೆಯ ಎಸ್ .ಐ. ಸೌಮ್ಯ, ಇರ್ವತ್ತೂರು ಗ್ರಾಪಂ ಪಿಡಿಒ ಅವಿನಾಶ್ ಬಿ.ಆರ್.,ಪಿಲಾತಬೆಟ್ಟು ಗ್ರಾಪಂ ಪಿಡಿಒ ಕೆ .ರಾಜಶೇಖರ ರೈ,ಮೆಸ್ಕಾಂನ ಪವರ್ ಮ್ಯಾನ್ ಗಳಾದ ಸಂತೋಷ್ ಬಿರಾದಾರ,ವಿಜಯಕುಮಾರ್ ಲಮಾಣಿ  ಅವರನ್ನು ಸನ್ಮಾನಿಸಲಾಯಿತು.

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುರುಷೋತ್ತಮ ಎಸ್.ಪಿ., ಬಂಟ್ವಾಳ ವಲಯ ಮೇಲ್ವಿಚಾರಕ ಕೇಶವ ಕಿಣಿ,ವಿಟ್ಲ ವಲಯದ ಮೇಲ್ವಿಚಾರಕ ಯೋಗೀಶ್ ಎಚ್.,ಪಿಲಾತಬೆಟ್ಟು ವ್ಯ.ಸೇ.ಸ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ, ಉಪಾಧ್ಯಕ್ಷ ಉಮೇಶ್ ಪೂಜಾರಿ, ನಿರ್ದೇಶಕರಾದ ಸುಂದರ ನಾಯ್ಕ್,ಬೂಬ ಸಪಲ್ಯ,ಸಂತೋಷ್ ಕುಮಾರ್ ಶೆಟ್ಟಿ,ಚಂದ್ರಶೇಖರ್ ಹೆಗ್ಡೆ ,ನಾರಾಯಣ ಪೂಜಾರಿ, ಹರ್ಷಿಣಿ,ದಿನೇಶ್ ಮೂಲ್ಯ ವೇದಿಕೆಯಲ್ಲಿದ್ದರು. 

ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ ಅವರು ಸ್ವಾಗತಿಸಿ,ಮಾತನಾಡಿ ಕೊರೋನದಂತ ಈ ಕಾಲಘಟ್ಟದಲ್ಲಿ ಮುನ್ನಚ್ಚರಿಕೆ ವಹಿಸಿ ಜಿಲ್ಲಾ ಸಹಕಾರಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಭವಿಷ್ಯದಲ್ಲಿ ಸಹಕಾರಿ ಸಪ್ತಾಹವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುವಂತಾಗಬೇಕು ಎಂದು ಹೇಳಿದರು.

ನಿರ್ದೇಶಕ  ಪ್ರಭಾಕರ ಪಿ.ಎಂ.ವಂದಿಸಿದರು.ಕಲಾವಿದ ಎಚ್.ಕೆ.ನಯನಾಡು ನಿರೂಪಿಸಿದರು. ಸಹಕಾರಿ ಸಪ್ತಾಹದ ಪ್ರಯುಕ್ತ ಸಹಕಾರಿ ಸಂಸ್ಥೆಗಳ ಮೂಲಕ ‘ಆರ್ಥಿಕ ಸೇರ್ಪಡೆ,ಡಿಜಿಟಲೈಜೇಷನ್ ಮತ್ತು ಸಾಮಾಜಿಕ ಜಾಲತಾಣ’ ದ ಕುರಿತು ಮೂಡಬಿದ್ರೆ ಸಹಕಾರ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಬಿಂದು ಬಿ.ನಾಯರ್ ವಿಷಯ ಮಂಡಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts